ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮವನ್ನ ಸುಮಾರು 27 ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ನಡೆಸುವ ಸಚಿವಾಲಯದ ಪ್ಲಾನ್​ ಈಗ ಬೂಮ್​ರ್ಯಾಂಗ್​ ಆಗಿದೆ. ಶಾಸಕರಿಗೆ ಚಿನ್ನದ ನಾಣ್ಯ ಹಾಗೂ ಸಚಿವಾಲಯದ ಅಧಿಕಾರಿಗಳಿಗೆ ಬೆಳ್ಳಿ ತಟ್ಟೆ ನೀಡುವ ವಿಚಾರವಾಗಿ ಪರ-ವಿರೋಧ ಚರ್ಚೆ ತೀವ್ರಗೊಂಡಿದೆ.

ಬೆಂಗಳೂರು (ಅ.16): ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮವನ್ನ ಸುಮಾರು 27 ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ನಡೆಸುವ ಸಚಿವಾಲಯದ ಪ್ಲಾನ್​ ಈಗ ಬೂಮ್​ರ್ಯಾಂಗ್​ ಆಗಿದೆ. ಶಾಸಕರಿಗೆ ಚಿನ್ನದ ನಾಣ್ಯ ಹಾಗೂ ಸಚಿವಾಲಯದ ಅಧಿಕಾರಿಗಳಿಗೆ ಬೆಳ್ಳಿ ತಟ್ಟೆ ನೀಡುವ ವಿಚಾರವಾಗಿ ಪರ-ವಿರೋಧ ಚರ್ಚೆ ತೀವ್ರಗೊಂಡಿದೆ.

ವಾಯ್ಸ್: ವಿಧಾನಸೌಧದ ವಜ್ರ ಮಹೋತ್ಸವ ಅದ್ದೂರಿಯಾಗಿ ಆಚರಿಸೋಕೆ ಸರ್ಕಾರ ಮುಂದಾಗಿದೆ.. 26 ಕೋಟಿ 87 ಲಕ್ಷ ವೆಚ್ಚದಲ್ಲಿ ವಜ್ರಮಹೋತ್ಸವಕ್ಕೆ ಆಚರಿಸಲು ನಿರ್ಧರಿಸಿದ್ದು, ಸುಮಾರು ಮೂರು ಕೋಟಿ ವೆಚ್ಚದಲ್ಲಿ ಶಾಸಕರಿಗೆ ಚಿನ್ನದ ನಾಣ್ಯ ಹಾಗೂ ಸಚಿವಾಲಯದ ಅಧಿಕಾರಿಗಳಿಗೆ ಬೆಳ್ಳಿ ತಟ್ಟೆ ನೀಡಲು ಮುಂದಾಗಿದ್ದಾರೆ.. ಸರ್ಕಾರದ ಈ ನಿರ್ಧಾರ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.

ವಿಧಾನಸೌಧದ ವಜ್ರ ಮಹೋತ್ಸವ ಕಾರ್ಯಕ್ರಮಕ್ಕಾಗಿ ವೆಚ್ಚ ಮಾಡಲು ಉದ್ದೇಶಿಸಿರುವ ಅಂದಾಜು ಪಟ್ಟಿಯ ಪ್ರಕಾರ ವಿಧಾನಸೌಧದ ಅಲಂಕಾರಕ್ಕೆ 75 ಲಕ್ಷ, ಕಾಫೀ-ಟೀ 35 ಲಕ್ಷ, ಭೋಜನ 3 ಕೋಟಿ 75 ಲಕ್ಷ, ವೇದಿಕೆ ಹಾಗೂ ಬೆಳಕಿಗೆ 3 ಕೋಟಿ 50 ಲಕ್ಷ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ50 ಲಕ್ಷ, 3 ಸಾಕ್ಷ್ಯ ಚಿತ್ರಕ್ಕೆ 3 ಕೋಟಿ 60 ಲಕ್ಷ, ಗೌರವಾರ್ಪಣೆಗೆ 10 ಲಕ್ಷ, ಸರ್ಕಾರದ ಸಾಧನೆಗಳ ಪ್ರದರ್ಶನಕ್ಕೆ 3 ಕೋಟಿ 4 ಲಕ್ಷ, ಪ್ರಚಾರಕ್ಕೆ 2 ಕೋಟಿ, ನೆನಪಿನ ಕಾಣಿಕೆ 3 ಕೋಟಿ, ಫೋಟೋ-ವೀಡಿಯೋ 75 ಲಕ್ಷ, ಸ್ವಚ್ಛತೆ-ಸಾರಿಗೆ-ವಸತಿ 50 ಲಕ್ಷ, ಜಿಎಸ್​ಟಿ ಮತ್ತು ಇತರೆಗೆ 5 ಕೋಟಿ ಹೀಗೆ ಒಟ್ಟು 26ಕೋಟಿ 87 ಲಕ್ಷ ರೂಪಾಯಿ ಅಂದಾಜು ವೆಚ್ಚದ ಪಟ್ಟಿ ತಯಾರಿಸಲಾಗಿದೆ.

ಒಟ್ಟಾರೆ ವಿಧಾನಸೌಧದ ವಜ್ರಮಹೋತ್ಸವ ಆಚರಣೆಯ ನೆಪದಲ್ಲಿ ದುಂದುವೆಚ್ಚಕ್ಕೆ ಮುಂದಾಗಿರುವದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಸರಳ ಆಚರಣೆಗೆ ಒತ್ತಾಯ ಜೋರಾಗಿದೆ.