ಪತಿ ರಾಜಕೀಯ ಪ್ರವೇಶದ ಬಗ್ಗೆ ಪ್ರಿಯಾಂಕಾ ಉಪೇಂದ್ರ ಪ್ರತಿಕ್ರಿಯೆ
ಬೆಂಗಳೂರು(ಆ.11): ರಿಯಲ್ ಸ್ಟಾರ್ ಉಪೇಂದ್ರ ಅವರು ರಾಜಕೀಯ ಸೇರ್ಪಡೆಯ ಬಗ್ಗೆ ಧ್ವನಿಮುದ್ರಿಕೆಯ ಮೂಲಕ ಸುಳಿವು ನೀಡಿದ್ದಾರೆ. ಈ ಬಗ್ಗೆ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಸುವರ್ಣ ನ್ಯೂಸ್'ಗೆ ಹೇಳಿಕೆ ನೀಡಿದ್ದಾರೆ.
' ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಸಮ್ಮತಿ ಇದೆ. ಜನರಿಗೆ ಏನಾದರೂ ಮಾಡಬೇಕೆಂದು ಮೊದಲೇ ಯೋಚಿಸುತ್ತಿದ್ದರು. ಉಪೇಂದ್ರ ರಾಜಕೀಯ ಪ್ರವೇಶ ಬಗ್ಗೆ ಇವತ್ತೇ ತಿಳಿಯಿತು. ಅವರ ರಾಜಕೀಯ ಪ್ರವೇಶಕ್ಕೆ ನನ್ನ ಒಪ್ಪಿಗೆ ಕೂಡ ಇದೆ. ರಾಜಕೀಯ ಪ್ರವೇಶ ಬಗ್ಗೆ ಉಪೇಂದ್ರ ಅವರಿಗೆ ಐಡಿಯಾ ತುಂಬಾ ಇದೆ. ವೈಯಕ್ತಿಕವಾಗಿ ರಾಜಕೀಯ ಪ್ರವೇಶ ಬಗ್ಗೆ ನನಗೆ ಗೊತ್ತಿರಲಿಲ್ಲ. ರಾಜಕೀಯ ಪ್ರವೇಶ ಬಗ್ಗೆ ಅವರ ಐಡಿಯಾ ನನಗೆ ಇಷ್ಟವಾಯಿತು.
ಯಾವುದೇ ಪಕ್ಷದ ಜೊತೆ ಗುರಿತಿಸಿಕೊಳ್ಳದೆ ಸ್ವತಂತ್ರ ಪಾರ್ಟಿ ಕಟ್ಟೋದು ಅವರ ಕನಸು. ನಾಳೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅವರು ಅಭಿಪ್ರಾಯ ತಿಳಿಯಲಿದೆ. ಜನರ ಸೇವೆ ಮಾಡಲು ಹಲವು ಮಾರ್ಗಗಳಿವೆ. ಉಪೇಂದ್ರ ಅವರು ತಮ್ಮದೇ ಆದ ಮಾರ್ಗ ಹುಡುಕುತ್ತಿದ್ದಾರೆ. ಮೊದಲು ಉಪೇಂದ್ರ ಅವರಿಗೆ ಬೆಂಬಲ ನೀಡುವುದಷ್ಟೇ ಮುಖ್ಯ
ನಾನು ರಾಜಕೀಯ ಪ್ರವೇಶ ಬಗ್ಗೆ ತೀರ್ಮಾನಿಸಿಲ್ಲ.ಸುವರ್ಣ ನ್ಯೂಸ್ನಿಂದಲೇ ನನಗೆ ಮೊದಲೇ ತಿಳಿಯಿತು. ಹೊಸ ಪಕ್ಷ ಕಟ್ಟುವ ಬಗ್ಗೆ ಅವರ ಯೋಚನೆ ಇಷ್ಟ ಆಯಿತು. ಇದು ಒಬ್ಬರ ಕೈಯಲ್ಲಿ ಮಾತ್ರ ಇಲ್ಲ ಎಲ್ಲರ ಬೆಂಬಲ ಮುಖ್ಯ'
- ಪ್ರಿಯಾಂಕಾ ಉಪೇಂದ್ರ
