ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತ ರಾಬರ್ಟ್ ವಾದ್ರಾ| ವಿಚಾರಣೆಗಾಗಿ ಇಡಿ ಕಚೇರಿಗೆ ಬಂದ ರಾಬರ್ಟ್ ವಾದ್ರಾ| ಪತಿಗೆ ಇಡಿ ಕಚೇರಿ ಬಳಿ ಡ್ರಾಪ್ ಮಾಡಿದ ಪತ್ನಿ ಪ್ರಿಯಾಂಕಾ ಗಾಂಧಿ ವಾದ್ರಾ| ಪೂರ್ವ ಉತ್ತರಪ್ರದೇಶ ಕಾಂಗ್ರೆಸ್ ಮಹಾ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ| ಇಡಿ ಕಚೇರಿಗೆ ಒಂದೇ ಕಾರಿನಲ್ಲಿ ಬಂದ ವಾದ್ರಾ ದಂಪತಿ|
ನವದೆಹಲಿ(ಫೆ.06): ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಇಂದು ಉದ್ಯಮಿ ರಾಬರ್ಟ್ ವಾದ್ರಾ ಜಾರಿ ನಿರ್ದೇಶನಾಲಯ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಈ ವೇಳೆ ರಾಬರ್ಟ್ ವಾದ್ರಾ ಅವರೊಂದಿಗೆ ಪತ್ನಿ, ಪೂರ್ವ ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಜೊತೆಗಿದ್ದರು.
ಪತಿ ರಾಬರ್ಟ್ ವಾದ್ರಾ ಅವರನ್ನು ಕಾರಿನಲ್ಲಿ ಇಡಿ ಕಚೇರಿಗೆ ಬಿಟ್ಟು ಪ್ರಿಯಾಂಕಾ ಹೊರಟು ಹೋದರು. ಬಿಳಿ ಬಣ್ಣದ ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಬಂದ ವಾದ್ರಾ ದಂಪತಿ ನೇರವಾಗಿ ಇಡಿ ಕಚೇರಿ ತಲುಪಿದರು.
ಈ ಮಧ್ಯೆ ಪ್ರಿಯಾಂಕಾ ಗಾಂಧಿ ವಾದ್ರಾ ಇಡಿ ಕಚೇರಿಗೆ ಬಂದಿದ್ದನ್ನು ವ್ಯಂಗ್ಯವಾಡಿರುವ ಬಿಜೆಪಿ, ಪತಿಯನ್ನು ವಿಚಾರಣೆಗೆ ಬಿಟ್ಟು ರಾಜಕೀಯ ನಿಭಾಯಿಸುತ್ತಿರುವ ಗಟ್ಟಿಗಿತ್ತಿ ಎಂದು ಕುಹುಕವಾಡಿದೆ.
ಇದೇ ವೇಳೆ ಶಬರಿಮಲೆ ತೀರ್ಪಿನ ಮರುಪರಿಶೀಲನೆ ಅರ್ಜಿಯ ವಿಚಾರಣೆಯ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ಬರಲ್ಲ, ಬರಲ್ಲ ಅಂತಾ ಪಾಲಿಟಿಕ್ಸ್ ಗೆ ಎಂಟ್ರಿ ಕೊಟ್ಟ ಪ್ರಿಯಾಂಕಾ ಗಾಂಧಿ!
ಯಾಂಕಾಗೆ ಪೂರ್ವ ಉತ್ತರ ಪ್ರದೇಶದ ಜವಾಬ್ದಾರಿ ಏಕೆ?
’ಕೈ’ ಗೆ ಹೊಸ ಶಕ್ತಿ ತುಂಬಿದ ಪ್ರಿಯಾಂಕ ಗಾಂಧಿ
ಪ್ರಿಯಾಂಕ ಅವರಿಗೆ ಜನರನ್ನು ಥಳಿಸುವ ಕಾಯಿಲೆ ಇದೆ: ಸುಬ್ರಮಣಿಯನ್ ಸ್ವಾಮಿ!
ಕಾಂಗ್ರೆಸ್ ನಲ್ಲಿಯೂ ಪ್ರಿಯಾಂಕ ಸೌಂದರ್ಯದ್ದೇ ಮಾತು! ಕಾಂಗ್ರೆಸ್ ಮುಖಂಡ ಹೇಳಿದ್ದೇನು..?
