ನವದೆಹಲಿ : ಬಿಜೆಪಿಯದ್ದು ಬ್ಯಾಡ್ ಲಕ್, ಪ್ರಿಯಾಂಕ ಗಾಂಧಿಯಂತಹ ಬ್ಯೂಟಿ ಪಕ್ಷದಲ್ಲಿ ಇಲ್ಲ. ಆದ್ದರಿಂದ ವೋಟುಗಳನ್ನು ಪಡೆದುಕೊಳ್ಳಲು ಹೇಮಾ ಮಾಲಿಯ ಬಳಿ ನೃತ್ಯ ಮಾಡಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡರೋರ್ವರು ವಿವಾದಿತ ಹೇಳಿಕೆ ನೀಡಿದ್ದಾರೆ. 

ಮಧ್ಯ ಪ್ರದೇಶ ಕಾಂಗ್ರೆಸ್ ಮುಖಂಡ ಸಜ್ಜನ್ ಸಿಂಗ್ ವರ್ಮಾ ಈ ರೀತಿ ಹೇಳಿಕೆ ನೀಡಿದ್ದು, ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶದ ಬಗ್ಗೆ ಬಿಜೆಪಿ ಮುಖಂಡರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 

ಪ್ರಿಯಾಂಕ ಗಾಂಧಿ ಸಕ್ರೀಯ ರಾಜಕಾರಣಕ್ಕೆ ಪ್ರವೇಶ ಮಾಡುತ್ತಿದ್ದಂತೆ ರಾಜಕೀಯ ವಲಯದಲ್ಲಿ ಅನೇಕ ಹೇಳಿಕೆಗಳು ಕೇಳಿ ಬಂದಿದ್ದವು.  ಇದೀಗ ಕಾಂಗ್ರೆಸ್ ಮುಖಂಡರೇ ಅವರ ಸೌಂದರ್ಯದ ಬಗ್ಗೆ ಹೇಳಿಕೆ ನೀಡಿದ್ದಾರೆ. 

ಅಲ್ಲದೇ ಪ್ರಿಯಾಂಕ ರೀತಿಯ ಪ್ರೆಟ್ಟಿ ಫೇಸ್ ಬಿಜೆಪಿಯಲ್ಲಿ ಇಲ್ಲ ಎಂದೂ ಅವರು ಹೇಳಿದ್ದಾರೆ.  ಪ್ರಿಯಾಂಕ ಗಾಂಧಿಯನ್ನು ದೇವರು ಅತ್ಯಂತ ಸುಂದರವಾಗಿ ಸೃಷ್ಠಿ ಮಾಡಿದ್ದಾರೆ. ಆ ಸೌಂದರ್ಯವೇ ಜನರಿಗೆ ಗೌರವ ಹಾಗೂ ಪ್ರೀತಿಯನ್ನು ಉಕ್ಕುವಂತೆ ಮಾಡುತ್ತದೆ ಎಂದಿದ್ದಾರೆ. 

ಪ್ರಿಯಾಂಕ ಗಾಂಧಿಯದ್ದು ಚಾಕೋಲೇಟ್ ಫೇಸ್  ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯ್ ವರ್ಗಿಯಾ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದು, ವರ್ಮಾ ಈ ಹೇಳಿಕೆಗೆ ಪ್ರಿಯಾಂಕ ಸೌಂದರ್ಯ ಹೊಗಳಿ ಪ್ರತಿಕ್ರಿಯೆ ನೀಡಿದ್ದಾರೆ.