ಬಹುಭಾಷಾ ನಟಿ ಪ್ರಿಯಾಮಣಿ ಹಸೆಮಣೆ ಕ್ಷಣಗಣನೆ ಶುರು. ಇಂದು ಸಂಜೆ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಮೆಹಂದಿ ಮತ್ತು ಸಂಗೀತ  ಕಾರ್ಯಕ್ರಮ ನಡೆಯಲಿದೆ.

ಬೆಂಗಳೂರು (ಆ.22): ಬಹುಭಾಷಾ ನಟಿ ಪ್ರಿಯಾಮಣಿ ಹಸೆಮಣೆ ಕ್ಷಣಗಣನೆ ಶುರು. ಇಂದು ಸಂಜೆ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಬಹುಕಾಲದ ಗೆಳೆಯ ಮುಸ್ತಾಫಾ ರಾಜ್ ಜತೆ ಇದೇ 23 ರಂದು ಪ್ರಿಯಾಮಣಿ ಮದುವೆಯಾಗಲಿದ್ದಾರೆ. ಬಹುದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರಿಯಾ-ಮುಸ್ತಫಾ, ಕಳೆದ ವರ್ಷ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಪ್ರಿಯಾಮಣಿ ಹಾಗೂ ಮುಸ್ತಫಾ ಅವರ ಕುಟುಂಬದವರ ಸಮ್ಮುಖದಲ್ಲಿ ಪರಸ್ಪರ ರಿಂಗ್ ಬದಲಿಸಿಕೊಂಡು ನಿಶ್ಚಿತಾರ್ಥ ಕಾರ್ಯ ಮುಗಿಸಲಾಗಿತ್ತು.ಇದೀಗ ಇಂದು ಮೆಹಂದಿ , ಸಂಗೀತ ಕಾರ್ಯಕಮ್ರವನ್ನ ಹಮ್ಮಿಕೊಂಡಿದ್ದು, ಆಪ್ತವಲಯದವರನ್ನ ಕರೆಯಲಾಗಿದೆ.

ಅದ್ದೂರಿ ಮದುವೆಗೆ ಇಚ್ಛಿಸದ ಈ ಜೋಡಿ, ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರು ಈ ವೇಳೆ ಭಾಗಿಯಾಗುವ ಸಾಧ್ಯತೆಯಿದೆ. ಇನ್ನು ಆಗಸ್ಟ್ 24 ರಂದು ಬೆಂಗಳೂರಿನಲ್ಲಿರೋ ಖಾಸಗಿ ಹೋಟೆಲ್ ಇಲಾನ್ ಕನ್ವೇಷನ್ ಸೆಂಟರ್ ಪಾರ್ಟಿ ಆಯೋಜಿಸಲಾಗಿದ್ದು, ಚಿತ್ರರಂಗದ ಹಲವು ಗಣ್ಯರು ಆಗಮಿಸಲಿದ್ದಾರಂತೆ.