ಈ ಬಾರಿ ಮಳೆ ಪ್ರಮಾಣ ಎಂದಿಗಿಂತ ಕಡಿಮೆಯಾಗಲಿದೆ ಎಂದು ಸ್ಕೈಮ್ಯಾಟ್ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಹೇಳಿದೆ.

ನವದೆಹಲಿ (ಮಾ.27): ಈ ಬಾರಿ ಮಳೆ ಪ್ರಮಾಣ ಎಂದಿಗಿಂತ ಕಡಿಮೆಯಾಗಲಿದೆ ಎಂದು ಸ್ಕೈಮ್ಯಾಟ್ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಹೇಳಿದೆ.

ಮುಂಬರುವ ಮಾನ್ಸೂನ್ ಸೀಸನ್ ನ ಕುರಿತು ಪಟ್ಟಿಯನ್ನು ಇಂದು ಸ್ಕೈಮ್ಯಾಟ್ ಬಿಡುಗಡೆ ಮಾಡಿದ್ದು, ಈ ಬಾರಿ ಮಳೆಯ ಪ್ರಮಾಣ ಶೇ.95 ಕ್ಕಿಂತ ಕಡಿಮೆಯಾಗಲಿದ್ದು , ಜೂನ್ ನಿಂದ ಸೆಪ್ಟೆಂಬರ್ ವರೆಗೆ 887 ಮಿಲಿ ಮೀಟರ್ ನಷ್ಟು ಮಳೆಯಾಗಬಹುದು ಎಂದು ಭವಿಷ್ಯ ನುಡಿದಿದೆ.

ಭಾರತೀಯ ಹವಾಮಾನ ಇಲಾಖೆ ಮುಂದಿನ ತಿಂಗಳು ಮಾನ್ಸೂನ್ ಪ್ರಮಾಣವನ್ನು ಹೇಳಲಿದೆ. ಮಳೆಗಾಲ ಪ್ರಾರಂಭವಾಗುವುದಕ್ಕೆ ಇನ್ನೂ ಎರಡ್ಮೂರು ತಿಂಗಳು ಬಾಕಿಯಿದ್ದು ಮುಂಚಿತವಾಗಿ ಮಳೆಯ ಪ್ರಮಾಣವನ್ನು ಅಂದಾಜಿಸಲಾಗಿದೆ. ಇದರಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮವನ್ನು ಎದುರಿಸಲು ರೈತರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಇದು ಸಹಾಯಕವಾಗಲಿ ಎಂದು ಕೃಷಿ ಇಲಾಖೆ ಹೇಳಿದೆ.