ಖಾಸಗಿ ಆಸ್ಪತ್ರೆಗಳ ಬಗ್ಗೆ ಹೊರಬಿತ್ತು ಆತಂಕಕಾರಿ ವಿಚಾರ

First Published 21, Feb 2018, 9:45 AM IST
Private hospitals Making More Profit on Drugs
Highlights

ಕೆಲ ಖಾಸಗಿ ಆಸ್ಪತ್ರೆಗಳ ಔಷಧಗಳ ಮಾರಾಟ ವೇಳೆ ಸಾವಿರಾರು ಪಟ್ಟು ಲಾಭ ಮಾಡಿಕೊಳ್ಳುತ್ತಿರುವ ಆತಂಕಕಾರಿ ವಿಷಯ ಹೊರಬಿದ್ದಿದೆ.

ನವದೆಹಲಿ: ಕೆಲ ಖಾಸಗಿ ಆಸ್ಪತ್ರೆಗಳ ಔಷಧಗಳ ಮಾರಾಟ ವೇಳೆ ಸಾವಿರಾರು ಪಟ್ಟು ಲಾಭ ಮಾಡಿಕೊಳ್ಳುತ್ತಿರುವ ಆತಂಕಕಾರಿ ವಿಷಯ ಹೊರಬಿದ್ದಿದೆ. ಕೆಲ ತಿಂಗಳ ಹಿಂದೆ ದೆಹಲಿ ಸೇರಿದಂತೆ ಸುತ್ತ ಮುತ್ತಲ ಕೆಲ ರಾಜ್ಯಗಳಲ್ಲಿ ರೋಗಿಗಳಿಗೆ 15 ದಿನಗಳ ಚಿಕಿತ್ಸೆಗೆ 10-18 ಲಕ್ಷ ರು.ವರೆಗೂ ಬಿಲ್ ನೀಡಿದ ವಿಷಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಔಷಧಿ ಪ್ರಾಧಿಕಾರ, ದೆಹಲಿಯ 4 ಆಸ್ಪತ್ರೆಗಳ ಬಿಲ್ ವಿಶ್ಲೇಷಿಸಿದಾಗ, ಆಸ್ಪತ್ರೆಗಳು ಸಾವಿರಾರು ಪಟ್ಟು ಲಾಭ ಮಾಡಿಕೊಳ್ಳುತ್ತಿರುವ ಅಂಶ ಬೆಳಕಿಗೆ ಬಂದಿದೆ.

ಅದರಲ್ಲೂ, ಸ್ಟಾಪ್‌ಕಾಕ್, ಬಿಎಲ್ ವಾಲ್, ಜಿಎಸ್-3040ರಲ್ಲಿ ಇನ್ನೂ ಹೆಚ್ಚು ಲಾಭ ಇರಿಸಿಕೊಳ್ಳುತ್ತಿವೆ. ಆಸ್ಪತ್ರೆಯೊಂದು ಉಪಕರಣವೊಂದರ ಖರೀದಿಗೆ ಕೇವಲ 5.77 ರು. ಪಾವತಿಸುತ್ತಿದ್ದರೆ, ಅದರ ಮಾರಾಟ ಬೆಲೆ ಗರಿಷ್ಠ 1,737 ಶೇ.ದಷ್ಟು ಏರಿಕೆ ಮಾಡಲಾಗಿತ್ತು.

ಆ್ಯಡ್ರೆನಾರ್ 2ಎಂಎಲ್ ಇಂಜೆಕ್ಷನ್‌ನ ಖರೀದಿ ಬೆಲೆ 14.70 ರು., ಅದನ್ನು ರೋಗಿಗಳಿಗೆ 5318 ರು.ಗೆ ಮಾರಲಾಗಿದೆ. ಟುಡೇಸೆಫ್ 1ಜಿಎಂ ಇಂಜೆಕ್ಷನ್ ಖರೀದಿ ಬೆಲೆ 40ರು., ಆದರೆ, ರೋಗಿಗಳಿಗೆ 860  ರು.ವಿಧಿಸಲಾಗಿದೆ.

loader