ಹೆಚ್ಚಿನ ಸಂಖ್ಯೆಯಲ್ಲಿ ನೋಟು ಮುದ್ರಣ ಮಾಡುತ್ತಿರುವುದರಿಂದ ಈ ದೋಷಗಳು ಉಂಟಾಗಿವೆ. ಈ ನೋಟುಗಳನ್ನೂ ಜನ ಚಲಾವಣೆ ಮಾಡಬಹುದು. ಇಲ್ಲವೇ ಅವನ್ನು ಆರ್‌ಬಿಐ ಶಾಖೆಗಳಲ್ಲಿ ವಾಪಸ್‌ ನೀಡಿ, ಬೇರೆ ನೋಟುಗಳನ್ನು ಪಡೆಯಬಹುದು’ ಎಂದು ಆರ್‌ಬಿಐ ತಿಳಿಸಿದೆ. ಕೆಲ ಹೊಸ ನೋಟುಗಳು ಸರಿಯಾಗಿ ಮುದ್ರಣವಾಗದಿರುವುದು ಕಂಡುಬಂದಿದೆ. ಕೆಲ ನೋಟುಗಳ ಬಣ್ಣ ಶೇಡ್‌ ಆಗಿದೆ.
ನವದೆಹಲಿ(ನ.25); ಹಳೆಯ ನೋಟುಗಳ ರದ್ದತಿಯ ಬಳಿಕ ಆರ್ಬಿಐ ಚಲಾವಣೆಗೆ ತಂದಿರುವ ಹೊಸ ₹500 ಮುಖಬೆಲೆಯ ಕೆಲವು ನೋಟುಗಳಲ್ಲಿ ಮುದ್ರಣ ದೋಷ ಕಂಡುಬಂದಿದೆ. ನೋಟಿನ ಸಂಖ್ಯೆಯ ಸ್ಥಾನ ಬದಲಾಗಿರುವುದು, ಮಹಾತ್ಮ ಗಾಂಧಿ ಚಿತ್ರ ಅಲುಗಿರುವುದು, ರಾಷ್ಟ್ರಲಾಂಛನ ಪಕ್ಕಕ್ಕೆ ಸರಿದಿರುವುದು ಸೇರಿದಂತೆ ಹಲವು ದೋಷಗಳು ಕಾಣಿಸಿಕೊಂಡಿವೆ.
ಹೆಚ್ಚಿನ ಸಂಖ್ಯೆಯಲ್ಲಿ ನೋಟು ಮುದ್ರಣ ಮಾಡುತ್ತಿರುವುದರಿಂದ ಈ ದೋಷಗಳು ಉಂಟಾಗಿವೆ. ಈ ನೋಟುಗಳನ್ನೂ ಜನ ಚಲಾವಣೆ ಮಾಡಬಹುದು. ಇಲ್ಲವೇ ಅವನ್ನು ಆರ್ಬಿಐ ಶಾಖೆಗಳಲ್ಲಿ ವಾಪಸ್ ನೀಡಿ, ಬೇರೆ ನೋಟುಗಳನ್ನು ಪಡೆಯಬಹುದು’ ಎಂದು ಆರ್ಬಿಐ ತಿಳಿಸಿದೆ. ಕೆಲ ಹೊಸ ನೋಟುಗಳು ಸರಿಯಾಗಿ ಮುದ್ರಣವಾಗದಿರುವುದು ಕಂಡುಬಂದಿದೆ. ಕೆಲ ನೋಟುಗಳ ಬಣ್ಣ ಶೇಡ್ ಆಗಿದೆ.
