ಬೆಂಗಳೂರಿನ ಸದಾಶಿವನಗರದ ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಆರೋಪ ಕೇಳಿ ಬಂದಿದೆ. ವಾಟ್ಸಾಪ್​ ಮೂಲಕ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಪ್ರಿನ್ಸಿಪಾಲ್​ ಕುಮಾರ್ ಠಾಕೂರ್​ ಬಣ್ಣ ಬಯಲಾಗಿದೆ. ಇನ್ನು ಪ್ರಿನ್ಸಿಪಾಲ್​ ಕಿರುಕುಳ ನೀಡುತ್ತಿದ್ದ ಬಗ್ಗೆ ಜನವರಿ 14ರಂದು ಚೈಲ್ಡ್ ಹೆಲ್ಪ್​ ಲೈನ್'​ಗೆ  ಶಿಕ್ಷಕಿಯರು ದೂರು ನೀಡಿದ್ದರು. ಈ ಬಗ್ಗೆ ಹೇಳಿಕೆ ಪಡೆದ ಚೈಲ್ಡ್ ಲೈನ್ ಅಧಿಕಾರಿಗಳು, ಜನವರಿ 24ರಂದು ಪೊಲೀಸ್ ಆಯುಕ್ತ ಪ್ರವೀಣ್​ ಸೂದ್​ಗೆ ದೂರು ನೀಡಿದ್ದರು.

ಬೆಂಗಳೂರು(ಫೆ.03): ಹೆಂಡತಿ ಸಹಕರಿಸದೆ ಇದ್ದಿದ್ದಕ್ಕೆ ಪ್ರಿನ್ಸಿಪಾಲೊಬ್ಬ ವಿದ್ಯಾರ್ಥಿಗಳಿಗೆ, ಶಿಕ್ಷಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

ಬೆಂಗಳೂರಿನ ಸದಾಶಿವನಗರದ ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಆರೋಪ ಕೇಳಿ ಬಂದಿದೆ. ವಾಟ್ಸಾಪ್​ ಮೂಲಕ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಪ್ರಿನ್ಸಿಪಾಲ್​ ಕುಮಾರ್ ಠಾಕೂರ್​ ಬಣ್ಣ ಬಯಲಾಗಿದೆ. ಇನ್ನು ಪ್ರಿನ್ಸಿಪಾಲ್​ ಕಿರುಕುಳ ನೀಡುತ್ತಿದ್ದ ಬಗ್ಗೆ ಜನವರಿ 14ರಂದು ಚೈಲ್ಡ್ ಹೆಲ್ಪ್​ ಲೈನ್'​ಗೆ ಶಿಕ್ಷಕಿಯರು ದೂರು ನೀಡಿದ್ದರು. ಈ ಬಗ್ಗೆ ಹೇಳಿಕೆ ಪಡೆದ ಚೈಲ್ಡ್ ಲೈನ್ ಅಧಿಕಾರಿಗಳು, ಜನವರಿ 24ರಂದು ಪೊಲೀಸ್ ಆಯುಕ್ತ ಪ್ರವೀಣ್​ ಸೂದ್​ಗೆ ದೂರು ನೀಡಿದ್ದರು.

ಆದರೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸದೆ, ಬೇರೆ ಸೆಕ್ಷನ್ ಹಾಕಿರುವ ಆರೋಪ ಕೇಳಿ ಬಂದಿದೆ. ಪ್ರಕರಣದನ್ವಯ ಜನವರಿ 31ಕ್ಕೆ ಪ್ರಿನ್ಸಿಪಾಲ್​ ಕುಮಾರ್ ಠಾಕೂರ್'​ನನ್ನು ಬಂಧಿಸಿ ಫೆಬ್ರವರಿ 1ಕ್ಕೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.