ಆತ ಹೆಸರಿಗೆ ಖಾಸಗಿ ಶಾಲೆಯ ಮೋಸ್ಟ್ ಬ್ಯಾಚುಲರ್ ಪ್ರಿನ್ಸಿಪಾಲ್. ಪರೀಕ್ಷೆಯಲ್ಲಿ ಪಾಸ್ ಆಗಬೇಕು ಎನ್ನುವ ವಿದ್ಯಾರ್ಥಿನಿಯರೆಲ್ಲಾ ಆತನ ಮುಂದೆ ಅಂಗಾಗ ಪ್ರದರ್ಶನ ಮಾಡ್ಲೆಬೇಕಂತೆ. ತನ್ನ ಕಾಮದಾಹವನ್ನು ತೀರಿಸಿಕೊಳ್ಳಲು ಶಾಲೆಯನ್ನು ಕಟ್ಟಿರುವ ಕಾಮುಕ ಪ್ರಿನ್ಸಿಪಾಲ್ ಒಬ್ಬನ ಕಥೆ ಇಲ್ಲಿದೆ
ಬೆಂಗಳೂರು(ಜೂ.28): ಆತ ಹೆಸರಿಗೆ ಖಾಸಗಿ ಶಾಲೆಯ ಮೋಸ್ಟ್ ಬ್ಯಾಚುಲರ್ ಪ್ರಿನ್ಸಿಪಾಲ್. ಪರೀಕ್ಷೆಯಲ್ಲಿ ಪಾಸ್ ಆಗಬೇಕು ಎನ್ನುವ ವಿದ್ಯಾರ್ಥಿನಿಯರೆಲ್ಲಾ ಆತನ ಮುಂದೆ ಅಂಗಾಗ ಪ್ರದರ್ಶನ ಮಾಡ್ಲೆಬೇಕಂತೆ. ತನ್ನ ಕಾಮದಾಹವನ್ನು ತೀರಿಸಿಕೊಳ್ಳಲು ಶಾಲೆಯನ್ನು ಕಟ್ಟಿರುವ ಕಾಮುಕ ಪ್ರಿನ್ಸಿಪಾಲ್ ಒಬ್ಬನ ಕಥೆ ಇಲ್ಲಿದೆ
ಆತನ ಹೆಸರು ಮುರಳಿಧರ್ ಅಂತ, ವಯಸ್ಸು ಅರವತ್ತೆರೆಡಾದರೂ ಬ್ಯಾಚುಲರ್ ಆಗಿರುವ ಈತ ಮೂಲತಃ ಮಂಗಳೂರಿನವನು. ಸಮಾಜ ಉದ್ಧಾರ ಮಾಡುತ್ತೇನೆ ಅಂತ ಶಾಲೆ ಕಟ್ಟಿ ತನ್ನ ಕಾಮದಾಟಕ್ಕೆ ಶಾಲೆಯ ವಿದ್ಯಾರ್ಥಿನಿಯರು ಸೇರಿದ್ದಂತೆ ಅಲ್ಲಿನ ಶಿಕ್ಷಕಿಯರಿಗೆ ಪೀಡಿಸುತ್ತಾನಂತೆ.
ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಗೋಪಾಲವಿದ್ಯಾಕೇಂದ್ರ ಎಂಬಾ ಶಾಲೆಯನ್ನು ಮುರುಳಿಧರ್ 10 ವರ್ಷಗಳ ಹಿಂದೆ ಕಟ್ಟಿದ್ದಾನೆ. 450 ಜನ ವಿದ್ಯಾರ್ಥಿಗಳಿರೋ ಈ ಶಾಲೆಯಲ್ಲಿ ಪ್ರಸ್ತುತ 14 ಜನ ಶಿಕ್ಷಕರು ಕೆಲಸ ಮಾಡ್ತಿದ್ರೆ, ಮುರಳಿಧರನ ಕಾಮ ಕಾಟವನ್ನ ಸಹಿಸದೆ ಅದೆಷ್ಟೋ ಶಿಕ್ಷಕರು ಕೆಲಸ ಬಿಟ್ಟಿದ್ದಾರೆ. ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೇ ನಿಮ್ಮನ್ನ ಪರೀಕ್ಷೆಯಲ್ಲಿ ಫೇಲ್ ಮಾಡುತ್ತೇನೆ ಅಂತ ಬೆದರಿಕೆಯೋನ್ನುಡ್ಡಿ ವಿದ್ಯಾರ್ಥಿಗಳ ಮೈ ಕೈ ಮುಟ್ಟೋ ಮೂಲಕ ಬರೋಬ್ಬರಿ 5 ವರ್ಷಗಳಿಂದ ವಿದ್ಯಾರ್ಥಿಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾನಂತೆ.
ಇನ್ನು ಅಲ್ಲಿ ಕೆಲಸ ಮಾಡೋ ಶೀಕ್ಷಕಿಯರನ್ನ ಕೂಡ ಈತ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪೀಡಿಸ್ತಾನೆ ಅಂತ ಆ ಶಾಲೆಯಲ್ಲಿ ಕಲಸ ಮಾಡುತ್ತಿರುವ ಅಲ್ಲಿನ ಶಿಕ್ಷಕಿಯೊಬ್ಬರು ತಮ್ಮ ಪ್ರಿನ್ಸಿಪಾಲ್ ವಿರುದ್ದ ಆರೋಪ ಮಾಡುತ್ತಿದ್ದಾರೆ.
ಆ ಶಾಲೆಯ ಮಕ್ಕಳು ಸೇರಿದ್ದಂತೆ ಶೀಕ್ಷಕಿಯರು ಈತನ ಕಿರುಕುಳಕ್ಕೆ ಬೇಸತ್ತು ಸಂಘಟನೆಯೊಂದರ ಮೊರೆ ಹೋಗಿದ್ದರು. ಇದಲ್ಲದೆ ಪೊಲೀಸ್ ಠಾಣೆಗೆ ದೂರು ಕೋಡದಂತೆ ಮಕ್ಕಳು ಸೇರಿದ್ದಂತೆ ಆ ಶಾಲೆಯ ಶೀಕ್ಷಕಿಯರಿಗೆ ಮುರುಳಿಧರ ಬೆದರಿಕೆ ಹಾಕಿ ಬೆಂಗಳೂರಿನಿಂದ ಪರಾರಿಯಾಗಿದ್ದಾನೆ. ಇನ್ನಾದರೂ ಈ ಕಾಮುಕ ಪ್ರೀನ್ಸಿಪಾಲ್ ಮುರುಳಿಧರ್'ಗೆ ಶಿಕ್ಷೆಯಾಗುತ್ತಾ ಎನ್ನುವುದನ್ನು ಕಾದು ನೋಡಬೇಕು.
