ಗ್ಯಾಸ್ ಇಲ್ಲಣ್ಣ ಅಂದ್ರೆ ಅಶೋಕ್, ಸುನಿಲಣ್ಣ ಕೇರಳ ಸ್ಟೋರಿ ಸಿನಿಮಾ ನೋಡ್ತಾರೆ: ಪ್ರದೀಪ್ ಈಶ್ವರ್
ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಉಂಟಾಗಿದೆ. ಈ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದರಿಂದಾಗಿ ಹೋಟೆಲ್ ಉದ್ಯಮವು ಸೌದೆ ಒಲೆಗಳತ್ತ ಮುಖ ಮಾಡುವಂತಾಗಿದೆ.

ಗ್ಯಾಸ್ ಇಲ್ಲಣ್ಣ
ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಭಾರತದ ಮೇಲೆ ಪರಿಣಾಮ ಬೀರಿದ್ದು, ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ಉಂಟಾಗಿದೆ. ಈ ಅಭಾವಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ಇಂದು ವಿಧಾನಸೌಧದ ಬಳಿ ಮಾತನಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಗ್ಯಾಸ್ ಇಲ್ಲಣ್ಣ ಅಂದ್ರೆ ಅಶೋಕ್, ಸುನೀಲಣ್ಣ ಕೇರಳ ಸ್ಟೋರಿ ಸಿನಿಮಾ ನೋಡ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಸಿಲಿಂಡರ್ ಸಮಸ್ಯೆ
ಕರ್ನಾಟಕದಲ್ಲಿ ಸಿಲಿಂಡರ್ ಸಮಸ್ಯೆಯಿಂದ ಪ್ರತಿಯೊಂದು ಕುಟುಂಬ ಸಮಸ್ಯೆ ಅನುಭವಿಸುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದರು. ಆದ್ರೆ ಇದೇ ಹೊತ್ತಲ್ಲೇ ವಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಸಚಿವ ಸುನೀಲಣ್ಣ ಕೇರಳ ಸ್ಟೋರಿ ಸಿನಿಮಾ ನೋಡ್ತಾರೆ. ಗ್ಯಾಸ್ ಸಿಲಿಂಡರ್ ಬಗ್ಗೆ ಮಾತಾಡಲ್ಲ ಎಂದು ಪ್ರದೀಪ್ ಈಶ್ವರ್ ಆಕ್ರೋಶ ವ್ಯಕ್ತಪಡಿಸಿದರು
ಎಫ್ ಸ್ಟೀನ್ ಫೈಲ್ ಪ್ರಸ್ತಾಪ
ಎಫ್ ಸ್ಟೀನ್ ಫೈಲ್‌ನಲ್ಲಿ ನರೇಂದ್ರ ಮೋದಿ, ಹರ್ದೀಪ್ ಸಿಂಗ್ ಪುರಿ, ಟ್ರಂಪ್ ಹೆಸರು ಕೂಡ ಇದೆ. ಇದನ್ನ ಹರ್ದೀಪ್ ಸಿಂಗ್ ಪುರಿ ಅವರೇ ಹೇಳಿದ್ದಾರೆ ಇದ್ದಿದ್ದು ನಿಜ ಅಂತ. ಅಮೆರಿಕದವರು ಎಫ್ ಸ್ಟೀನ್ ವಿವಾದ ಮರೆಮಾಚಲು ಇರಾನ್ ಮೇಲೆ ದಾಳಿ ಮಾಡಿದೆ ಎಂದು ಹೇಳಿದರು.
ಎಲ್‌ಪಿಜಿ ಗ್ಯಾಸ್ ಪೂರೈಕೆ ವ್ಯತ್ಯಯ
ಎಲ್‌ಪಿಜಿ ಗ್ಯಾಸ್ ಪೂರೈಕೆ ವ್ಯತ್ಯಯಕ್ಕೆ ಬಿಜೆಪಿಯೇ ನೇರ ಕಾರಣ. ನಮ್ಮ ದೇಶದ ಪಧಾನಿ ಕಾರಣ ಅಂತ ಯುಎಸ್ ಮೀಡಿಯಾ ಮಾತಾಡ್ತಾವೆ. ಕೇರಳ ಸ್ಟೋರಿ ನೋಡ್ತಾರೆ, ಆದ್ರೆ ಕರ್ನಾಟಕ ಸ್ಟೋರಿ ಕೇಳೋರು ಯಾರು ಅಶೋಕಣ್ಣ? ಬಿಜೆಪಿ ಅಂಧ ಭಕ್ತರೇ, ವಾಟ್ಸಪ್ ಯುನಿವರ್ಸಿಟಿ ವ್ಯವಸ್ಥಾಪಕರೇ? ಕರ್ನಾಟಕ ದ ಗೃಹಣಿಯರು ಯೋಚನೆ ಮಾಡಬೇಕು, ಕೇಂದ್ರದ ಬಿಜೆಪಿ ಅವರನ್ನ ನಂಬಬೇಡಿ ಎಂದು ಹೇಳಿದರು.
ಇದನ್ನೂ ಓದಿ: ChatGPT ಹೇಳಿದ ಅಸ್ಸಾಂ ಗೆಲುವಿನ ರಹಸ್ಯವನ್ನು ಹಂಚಿಕೊಂಡ್ರು DCM ಡಿಕೆ ಶಿವಕುಮಾರ್
ಹೋಟೆಲ್
ರಾಜ್ಯದಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಭಾಗಶಃ ಸ್ಥಗಿತಗೊಂಡಿದ್ದು, ಹೋಟೆಲ್‌ಗಳ ಮೇಲೆ ನೇರ ಪರಿಣಾಮ ಬೀರಿದೆ. ಈಗಾಗಲೇ ರಾಜಧಾನಿಯಲ್ಲಿ ಹಲವೆಡೆ ಸಿಲಿಂಡರ್ ಲಭ್ಯವಾಗದ ಹಿನ್ನೆಲೆ ಹೋಟೆಲ್ ಕ್ಲೋಸ್ ಮಾಡುತ್ತಾರೆ. ಕೆಲ ಹೋಟೆಲ್‌ಗಳು ಸೌದೆ ಒಲೆ ಬಳಕೆಗೆ ಮುಂದಾಗಿವೆ.
ಇದನ್ನೂ ಓದಿ: Adani: ಅದಾನಿ, ಎಪ್‌ಸ್ಟೀನ್ ಕೇಸ್‌ನಿಂದ ಮೋದಿ ಪ್ಯಾನಿಕ್ ಆಗಿದ್ದಾರೆ, LPG ಸಂಕಷ್ಟದಿಂದಲ್ಲ: ರಾಹುಲ್ ಗಾಂಧಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

