Asianet Suvarna News Asianet Suvarna News

ರಾಷ್ಟ್ರಪತಿಗೆ ಗರ್ಭಗುಡಿ ಪ್ರವೇಶ ನಿಷೇಧ: ಅರ್ಚಕನ ಮೇಲೆ ಹಲ್ಲೆ

 ರಾಜಸ್ಥಾನದ ಪುಷ್ಕರದಲ್ಲಿರುವ ಪ್ರಸಿದ್ದ ಬ್ರಹ್ಮ ದೇವಾಲಯ ಗರ್ಭಗೃಹ ಪ್ರವೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಅನುಮತಿ ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರಪತಿಗಳಿಗೆ ಪ್ರವೇಶ ನಿರಾಕರಿಸಿದ ಅರ್ಚಕನ ಮೇಲೆ ಭಕ್ತರಂತೆ ವೇಷ ಧರಿಸಿದ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ.

Priest attacked for not allowing President enter temple

ಜೈಪುರ್(ಮೇ 29):  ರಾಜಸ್ಥಾನದ ಪುಷ್ಕರದಲ್ಲಿರುವ ಪ್ರಸಿದ್ದ ಬ್ರಹ್ಮ ದೇವಾಲಯ ಗರ್ಭಗೃಹ ಪ್ರವೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಅನುಮತಿ ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರಪತಿಗಳಿಗೆ ಪ್ರವೇಶ ನಿರಾಕರಿಸಿದ ಅರ್ಚಕನ ಮೇಲೆ ಭಕ್ತರಂತೆ ವೇಷ ಧರಿಸಿದ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ.

ಅಶೋಕ್ ಮೇಘವಾಲ್ ಎಂಬ ವ್ಯಕ್ತಿ ದೇವಾಲಯಕ್ಕೆ ಬಂದು ಅರ್ಚಕ ಮಹದೇವಪುರಿ ಅವರಿಗೆ ಥಳಿಸಿದ್ದಾನೆ ಎಂದು ಪುಷ್ಕರ ದೇವಾಲಯದ ಆಡಳಿತಾಧಿಕಾರಿ ಮಹಾವೀರ ಶರ್ಮಾ ಆರೋಪಿಸಿದ್ದಾರೆ. ಅಲ್ಲದೇ ಅಶೋಕ್ ಮಾನಸಿಕ ಅಸ್ವಸ್ಥನಾಗಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ಪತ್ನಿ ಅವರಿಗೆ ಮೊಣಕಾಲು ಸಮಸ್ಯೆ ಇದ್ದ ಕಾರಣ ಕೋವಿಂದ್ ತಮ್ಮ ಇತ್ತೀಚಿನ ಪುಷ್ಕರ ಭೇಟಿ ವೇಳೆ ದೇವಾಲಯದ ಒಳ ಪ್ರವೇಶಿಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆರೋಪಿ ತನ್ನ ಕೈನಲ್ಲಿದ್ದ ಮಾರಕಾಸ್ತ್ರದಿಂದ ಅರ್ಚಕರ ಮೇಲೆ ಹಲ್ಲೆ ನಡೆಸುವ ಚಿತ್ರಗಳು ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿದೆ. ಪುಷ್ಕರದ ಈ ಘಟನೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios