. ಬಳಿಕ ಏಪ್ರಿಲ್ 6ರಂದು ರಾಜ್ಯಸಭೆಯಲ್ಲಿ ಕೇಂದ್ರ ಸರಕು  ಮತ್ತು ಸೇವಾ ತೆರಿಗೆ ಮಸೂದೆ ಮಸೂದೆ 2017, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಕೇಂದ್ರಾಡಳಿತ ಪ್ರದೇಶ ಸರಕು  ಮತ್ತು ಸೇವಾ ತೆರಿಗೆ ಮಸೂದೆ-2017, ಜಿಎಸ್ ಟಿ ಮಸೂದೆ - 2017 ಗಳನ್ನು ಅಂಗೀಕರಿಸಲಾಗಿತ್ತು.

ಬಹು ನಿರೀಕ್ಷಿತ ಏಕರೂಪದ ತೆರಿಗೆ ನೀತಿ ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಕಿತ ಹಾಕಿದ್ದಾರೆ. ಸಂಸತ್ ನ ಉಭಯ ಕಲಾಪಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಕೇಂದ್ರ ಸರ್ಕಾರದ ಉದ್ದೇಶಿತ ಜಿಎಸ್ ಟಿ ಮಸೂದೆ ಹಲವು ತಿದ್ದುಪಡಿಗಳೊಂದಿಗೆ ಉಭಯ ಸದನಗಳ ಅನುಮೋದನೆ ಪಡೆದಿತ್ತು.

Add Asianetnews Kannada as a Preferred SourcegooglePreferred

ಇದೀಗ ಈ ಮಹತ್ವಾಕಾಂಕ್ಷಿ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಕಿತ ಹಾಕಿದ್ದು, ಇನ್ನು ದೇಶಾದ್ಯಂತ ಏಕರೂಪದ ತೆರಿಗೆ ನೀತಿ ಜಾರಿಯಾಗಲಿದೆ.ಕಳೆದ ಮಾರ್ಚ್ 29ರಂದು ಲೋಕಸಭೆಯಲ್ಲಿ ಸತತ 8 ಗಂಟೆಗಳ ಕಾಲ ಚರ್ಚೆಗೀಡಾಗಿದ್ದ ಜಿಎಸ್ ಟಿ ಮಸೂದೆಯನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದರು. ಬಳಿಕ ಏಪ್ರಿಲ್ 6ರಂದು ರಾಜ್ಯಸಭೆಯಲ್ಲಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ ಮಸೂದೆ 2017, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಜಿಎಸ್ ಟಿ ಮಸೂದೆ - 2017 ಗಳನ್ನು ಅಂಗೀಕರಿಸಲಾಗಿತ್ತು. ಕೇಂದ್ರ ಮತ್ತು ಏಕೀಕೃತ ಜಿಎಸ್ ಟಿ ಮಸೂದೆಯು ದೇಶವ್ಯಾಪಿ ಏಕರೂಪದ ದಂಡ ಮತ್ತು ತೆರಿಗೆ ಸಂಗ್ರಹಿಸುವ ಕಾನೂನಾಗಿದ್ದು, ಜಿಎಸ್ ಟಿ ಪರಿಹಾರ ಮಸೂದೆಯೂ ಜಿಎಸ್ ಟಿ ಜಾರಿ ಬಳಿಕ ರಾಜ್ಯ ಸರ್ಕಾರಗಳಿಗಾಗುವ ನಷ್ಟವನ್ನು ಭರಿಸುವ ಮತ್ತು ಪರಿಹಾರ ನೀಡುವ ಮಸೂದೆಯಾಗಿದೆ. ಇದು ಕೇಂದ್ರಾಡಳಿತ ಪ್ರದೇಶಕ್ಕೂ ಅನ್ವಯವಾಗಲಿದೆ.