Asianet Suvarna News Asianet Suvarna News

ರಾಮನಾಥ್ ಕೋವಿಂದ್ V/S ಮೀರಾ ಕುಮಾರ್ :ಇಂದು ರಾಷ್ಟ್ರಪತಿ ಚುನಾವಣೆ

ಸ್ವತಂತ್ರ ಭಾರತದ 14ನೇ ರಾಷ್ಟ್ರಪತಿ ಆಯ್ಕೆಗೆ ವೇದಿಕೆ ಸಜ್ಜಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ಮತ್ತು ಕಾಶ್ಮೀರದಿಂದ ಹಿಡಿದು ತಿರುವನಂತ ಪುರದವರೆಗಿನ ಎಲ್ಲ ರಾಜ್ಯಗಳ ವಿಧಾನ ಸಭೆಯ ಸದಸ್ಯರು ಹೊಸ ರಾಷ್ಟ್ರಪತಿ ಆಯ್ಕೆಗಾಗಿ ಇಂದು ಮತದಾನ ಮಾಡಲಿದ್ದಾರೆ.

Presidential election Today Ram Nath Kovind vs Meira Kumar
  • Facebook
  • Twitter
  • Whatsapp

ನವದೆಹಲಿ(ಜು.16): ನಾಳೆ ಪ್ರಣಬ್ ಮುಖರ್ಜಿ ಉತ್ತರಾಧಿಕಾರಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಲೋಕಸಭೆ ಹಾಗೂ ರಾಜ್ಯಸಭೆ ಸಂಸದರು ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆ ಸದಸ್ಯರು ಮತದಾನ ಮಾಡಲಿದ್ದಾರೆ. ಆಯಾಯ ವಿಧಾನಸಭೆಗಳಲ್ಲಿ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ.  

ಸ್ವತಂತ್ರ ಭಾರತದ 14ನೇ ರಾಷ್ಟ್ರಪತಿ ಆಯ್ಕೆಗೆ ವೇದಿಕೆ ಸಜ್ಜಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ಮತ್ತು ಕಾಶ್ಮೀರದಿಂದ ಹಿಡಿದು ತಿರುವನಂತ ಪುರದವರೆಗಿನ ಎಲ್ಲ ರಾಜ್ಯಗಳ ವಿಧಾನ ಸಭೆಯ ಸದಸ್ಯರು ಹೊಸ ರಾಷ್ಟ್ರಪತಿ ಆಯ್ಕೆಗಾಗಿ ಇಂದು ಮತದಾನ ಮಾಡಲಿದ್ದಾರೆ.

ಎನ್‌ಡಿಎ ಅಭ್ಯರ್ಥಿಯಾಗಿ  ರಾಮನಾಥ್ ಕೋವಿಂದ್ ಮತ್ತು ಯುಪಿಎ ಅಭ್ಯರ್ಥಿಯಾಗಿ ಮೀರಾಕುಮಾರ್ ನಿಂತಿರುವುದರಿಂದ ದಲಿತ ಫೈಟ್ ಎಂದೇ ಕರೆಯಲಾಗುತ್ತಿದೆ. ಸಂಸದರಿಗೆ ಪಾರ್ಲಿಮೆಂಟ್ ಹೌಸ್ ನಲ್ಲಿ ಮತದಾನಕ್ಕೆ ವ್ಯವಸ್ಥೆ ಇದ್ದರೆ ಶಾಸಕರಿಗೆ ಆಯಾ ರಾಜ್ಯಗಳ ವಿಧಾನ ಸಭೆಗಳಲ್ಲಿ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ.  ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದೆ.

ಕೋವಿಂಗ್‌ಗೆ ಬೆಂಬಲ ನೀಡುವ ಪಕ್ಷಗಳು

ಬಿಜೆಪಿ, ಶಿವಸೇನೆ, ಅಕಾಲಿ ದಳ

ತೆಲುಗು ದೇಶಂ ಪಕ್ಷ,ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ

ತೆಲಂಗಾಣ ರಾಷ್ಟ್ರ ಸಮಿತಿ, ವೈಎಸ್ ಆರ್ ಕಾಂಗ್ರೆಸ್

ನಿತೀಶ್ ನೇತೃತ್ವದ ಜನತಾ ದಳ ಯುನೈಟೆಡ್

ಆಡಳಿತಾರೂಡ ಎನ್‌ಡಿಎ ಅಭ್ಯರ್ಥಿಯಾಗಿರುವ ರಾಮನಾಥ್ ಕೋವಿಂದ್ ಅವರಿಗೆ ಬಿಜೆಪಿ ಹೊರತಾಗಿ ಶಿವಸೇನೆ ಬೆಂಬಲ ಸೂಚಿಸಿದೆ. ಅಕಾಲಿ ದಳ, ತೆಲಗುದೇಶಂ ಪಕ್ಷ,  ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ, ತೆಂಲಗಾಣ ರಾಷ್ಟ್ರ ಸಮಿತಿ, ವೈಎಸ್ಆರ್ ಕಾಂಗ್ರೆಸ್ ಸೇರಿದಂತೆ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ ಯುನೈಟೆಡ್ ಬೆಂಬಲ ಖಾತ್ರಿಯಾಗಿದೆ. ಆದ್ರೆ ಮುಲಾಯಂ ಅಖಿಲೇಶ್ ನಡುವಿನ ತಿಕ್ಕಾಟದಿಂದ ಸಮಾಜವಾದಿ ಪಕ್ಷದ ಕೆಲವೊಂದಿಷ್ಟು ಮತಗಳು ಕೂಡ ನಿಶ್ಚಿತವಾಗಿ ಸಿಗಲಿವೆ

ಮೀರಾಕುಮಾರ್‌ಗೆ ಬೆಂಬಲ ಸೂಚಿಸುವ ಪಕ್ಷಗಳು

ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್

ಜನತಾದಳ ಸೆಕ್ಯುಲರ್, ಜೆಡಿಎಸ್

ಆಮ್ ಆದ್ಮಿ ಪಕ್ಷ

ವಿಪಕ್ಷಗಳ ಅಭ್ಯರ್ಥಿಯಾಗಿರುವ ಬಾಬು ಜಗಜೀವನ್ ರಾಮ್ ಪುತ್ರಿ ಮೀರಾಕುಮಾರ ಅವರಿಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಜನತಾ ದಳ ಸೆಕ್ಯುಲರ್, ಜನತಾ ದಳ, ಆಮ್ ಆದ್ಮಿ ಪಕ್ಷದ ಬೆಂಬಲ ನಿಕ್ಕಿಯಾಗಿದೆ

ರಾಷ್ಟ್ರಪತಿ ಆಗಲು ಯಾವುದೇ ಅಭ್ಯರ್ಥಿಗೆ ಒಟ್ಟು ಮತಗಳ ೫೧ ಪ್ರತಿಶತ ಮತಗಳು ಬೀಳಬೇಕು ಈಗಿನ ಲೆಕ್ಕಾಚಾರದ ಪ್ರಕಾರ ಪ್ರಾದೇಶಿಕ ಪಕ್ಷಗಳ ಮತಗಳ ಕಾರಣದಿಂದ ರಾಮನಾಥ್ ಕೋವಿಂದ್ ಅವರಿಗೆ ೬೫ ಪ್ರತಿಶತ ಮತ ಮತ್ತು ಮೀರಾಕುಮಾರ್ ಅವರಿಗೆ ೩೫ ಪ್ರತಿಶತ ಮತಗಳು ಬೀಳಲಿವೆ. ಹೀಗಾಗಿ ರಾಮನಾಥ್ ಕೋವಿಂದ ವಿಜಯಿಯಾಗುವುದು ನಿಶ್ಚಿತ ಎನ್ನಲಾಗಿದೆ. ಆದ್ರೆ ಚುನಾವಣೆ ವೇಳೆ ಅಡ್ಡಮತದಾನ ನಡೆಯುವ ಭೀತಿ ಕೂಡ ಇದೆ. ಹೀಗಾಗಿ ಪ್ರಣಬ್ ಮುಖರ್ಜಿ ಉತ್ತರಾಧಿಕಾರಿ ಯಾರಾಗ್ತಾರೆ ಎಂಬುದಕ್ಕೆ ಜುಲೈ 20ರವರೆಗೂ ಕಾಯಲೇಬೇಕು.

ಇಂದು ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ

ಆಗಸ್ಟ್ 5ರಂದು ನಿಗದಿಯಾಗಿರುವ ಉಪ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಸೋಮವಾರ ಇಲ್ಲಿ ನಡೆಯಲಿರುವ ಬಿಜೆಪಿ ಸಂಸದೀಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಉಪರಾಷ್ಟ್ರಪತಿ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಲು ಜು.18 ಕೊನೆಯ ದಿನಾಂಕವಾಗಿದ್ದು, ಸೋಮವಾರದ ಬಿಜೆಪಿ ಸಂಸದೀಯ ಸಭೆಯಲ್ಲಿ ಎನ್‌ಡಿಎ ಅಭ್ಯರ್ಥಿ ಆಯ್ಕೆ ನಡೆಯಲಿದೆ. ರಾಜ್ಯಸಭೆ ಮತ್ತು ಲೋಕಸಭೆಯ 790 ಸಂಸದರು ಸೇರಿದಂತೆ ಇತರ ಜನಪ್ರತಿನಿಧಿಗಳು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಕಾಂಗ್ರೆಸ್ ನೇತೃತ್ವದ 18 ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ

Follow Us:
Download App:
  • android
  • ios