ರಾಮ್ ನಾಥ್ ಕೋವಿಂದರನ್ನು ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾರ್ಯಾರು ಏನೇನು ಹೇಳಿದ್ದಾರೆ ಇಲ್ಲಿದೆ ನೋಡಿ.

ನವದೆಹಲಿ (ಜೂ.19): ರಾಮ್ ನಾಥ್ ಕೋವಿಂದರನ್ನು ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾರ್ಯಾರು ಏನೇನು ಹೇಳಿದ್ದಾರೆ ಇಲ್ಲಿದೆ ನೋಡಿ.

Add Asianetnews Kannada as a Preferred SourcegooglePreferred

ರಾಮ್ ನಾಥ್ ಕೋವಿಂದ ಮಣ್ಣಿನ ಮಗ. ಸಾಧಾರಣ ಹಿನ್ನಲೆಯಿಂದ ಬಂದವರು. ಬಡವರಿಗೆ ಮತ್ತು ಕೆಳಹಂತದವರ ಅಭಿವೃದ್ಧಿಗಾಗಿ, ಸಾರ್ವಜನಿಕ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡಲಿದ್ದಾರೆ.

-ಪ್ರಧಾನಿ ನರೇಂದ್ರ ಮೋದಿ

Scroll to load tweet…

* ರಾಮ್ ನಾಥ್ ಕೋವಿಂದ ನಾಯಕತ್ವದಲ್ಲಿ ಭಾರತ ಅಭಿವೃಧ್ದಿ ಸಾಧಿಸಲಿದೆ ಮತ್ತು ಹಿಂದುಳಿದ ವರ್ಗದವರು ನ್ಯಾಯವನ್ನು ಪಡೆಯಲಿದ್ದಾರೆ.

-ನಿತಿನ್ ಗಡ್ಕರಿ

* ರಾಜಕೀಯೇತರ ದಲಿತ ವ್ಯಕ್ತಿಗಳನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಎನ್'ಡಿಎ ಆಯ್ಕೆ ಮಾಡಬೇಕಿತ್ತು ಎಂಬುದು ನಮ್ಮ ಅಭಿಪ್ರಾಯ.

-ಮಾಯಾವತಿ

ಬಿಹಾರ ರಾಜ್ಯಪಾಲ ರಾಮ ನಾಥ್ ಕೋವಿಂದರನ್ನು ಆಯ್ಕೆ ಮಾಡಿರುವುದು ಸಂತೋಷದ ವಿಚಾರ. ಅವರನ್ನು ಶೀಘ್ರದಲ್ಲಿಯೇ ಭೇಟಿ ಮಾಡಿ ಅಭಿನಂದಿಸುತ್ತೇನೆ

-ನಿತೀಶ್ ಕುಮಾರ್

ದೇಶದಲ್ಲಿ ಇನ್ನು ಹಲವು ಒಳ್ಳೆಯ ನಾಯಕರಿದ್ದರು. ಇವರ ಬಗ್ಗೆ ನಮಗೆ ಗೊತ್ತೇ ಇಲ್ಲ

-ಮಮತಾ ಬ್ಯಾನರ್ಜಿ

* ಎನ್ ಡಿಎ ನಿರ್ಧಾರವನ್ನು ಯೋಗಿ ಆದಿತ್ಯನಾಥ್ ಸ್ವಾಗತಿಸಿದ್ದಾರೆ.

* ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ.

-ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ಸಿಎಸ್ ರಾವ್

* ಎನ್ ಡಿಎ ಅಭ್ಯರ್ಥಿ ವಿರುದ್ಧ ನಾವು ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ

-ಸಿಪಿಎಂ