Asianet Suvarna News Asianet Suvarna News

ದಕ್ಷಿಣ ಕೊರಿಯಾ ಜೊತೆ ಸಮರಾಭ್ಯಾಸ ನಿಲ್ಲಿಸಲು ಅಮೇರಿಕಾ ಒಪ್ಪಿಗೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್‌ ಜಾಂಗ್‌ ಉನ್‌ ನಡುವೆ ಸಿಂಗಾಪುರದಲ್ಲಿ ಮಂಗಳವಾರ ನಡೆದ ಐತಿಹಾಸಿಕ ಶಾಂತಿ ಮಾತುಕತೆ ಯಶಸ್ವಿಯಾಗಿದೆ. ಅಮೆರಿಕದ ಭದ್ರತಾ ಖಾತ್ರಿಗೆ ಒಪ್ಪಿ, ತನ್ನ ದೇಶವನ್ನು ಸಂಪೂರ್ಣ ಅಣ್ವಸ್ತ್ರ ನಿಶ್ಶಸ್ತ್ರೀಕರಣ ಮಾಡಲು ಕಿಮ್‌ ಜಾಂಗ್‌ ಒಪ್ಪಿದ್ದರೆ, ಉತ್ತರ ಕೊರಿಯಾದ ದೀರ್ಘಕಾಲಿನ ಬೇಡಿಕೆಯಂತೆ ದಕ್ಷಿಣ ಕೊರಿಯಾ ಜತೆಗಿನ ಸೇನಾ ಸಮರಾಭ್ಯಾಸವನ್ನು ನಿಲ್ಲಿಸುವುದಾಗಿ ಅಮೆರಿಕ ಘೋಷಣೆ ಮಾಡಿದೆ. 

President Trump Agrees To Suspend Military Drills With South Korea
Author
Bengaluru, First Published Jun 13, 2018, 12:06 PM IST

ಸಿಂಗಾಪುರ (ಜೂ. 13): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್‌ ಜಾಂಗ್‌ ಉನ್‌ ನಡುವೆ ಸಿಂಗಾಪುರದಲ್ಲಿ ಮಂಗಳವಾರ ನಡೆದ ಐತಿಹಾಸಿಕ ಶಾಂತಿ ಮಾತುಕತೆ ಯಶಸ್ವಿಯಾಗಿದೆ.

ಅಮೆರಿಕದ ಭದ್ರತಾ ಖಾತ್ರಿಗೆ ಒಪ್ಪಿ, ತನ್ನ ದೇಶವನ್ನು ಸಂಪೂರ್ಣ ಅಣ್ವಸ್ತ್ರ ನಿಶ್ಶಸ್ತ್ರೀಕರಣ ಮಾಡಲು ಕಿಮ್‌ ಜಾಂಗ್‌ ಒಪ್ಪಿದ್ದರೆ, ಉತ್ತರ ಕೊರಿಯಾದ ದೀರ್ಘಕಾಲಿನ ಬೇಡಿಕೆಯಂತೆ ದಕ್ಷಿಣ ಕೊರಿಯಾ ಜತೆಗಿನ ಸೇನಾ ಸಮರಾಭ್ಯಾಸವನ್ನು ನಿಲ್ಲಿಸುವುದಾಗಿ ಅಮೆರಿಕ ಘೋಷಣೆ ಮಾಡಿದೆ. ಈ ಮಾತುಕತೆಯಿಂದಾಗಿ ಎರಡೂ ದೇಶಗಳ ನಡುವಣ ಅಣ್ವಸ್ತ್ರ ಸಮರ ಭೀತಿ ಪರಿಪೂರ್ಣವಾಗಿ ನಿವಾರಣೆಯಾದಂತಾಗಿದೆ.

ಮಾತುಕತೆ ಫಲಪ್ರದವಾಗಿದ್ದರೂ, ಅಣ್ವಸ್ತ್ರ ಪರೀಕ್ಷೆ ಕಾರಣಕ್ಕೆ ಉತ್ತರ ಕೊರಿಯಾ ಮೇಲೆ ಹೇರಲಾಗಿರುವ ದಿಗ್ಬಂಧನಗಳು ಸದ್ಯದ ಮಟ್ಟಿಗೆ ತೆರವಾಗುವುದಿಲ್ಲ. ಅಣ್ವಸ್ತ್ರ ನಿಶ್ಶಸ್ತ್ರೀಕರಣ ಘೋಷಣೆಯನ್ನು ಉತ್ತರ ಕೊರಿಯಾ ಯಾವ ರೀತಿ ಅನುಷ್ಠಾನಕ್ಕೆ ತರಲಿದೆ ಎಂಬುದರ ಪ್ರಗತಿ ಆಧರಿಸಿ ಅದನ್ನು ಹಿಂಪಡೆಯಲಾಗುತ್ತದೆ ಎಂದು ಅಮೆರಿಕ ಘೋಷಣೆ ಮಾಡಿದೆ.

ಎರಡೂ ದೇಶಗಳ ನಡುವೆ ವಾಕ್ಸಮರ ತಾರಕಕ್ಕೇರಿದ್ದಾಗ ಕಿಮ್‌ ಜಾಂಗ್‌ರನ್ನು ‘ರಾಕೆಟ್‌ ಮ್ಯಾನ್‌’ ಎಂದು ಲೇವಡಿ ಮಾಡಿದ್ದ ಟ್ರಂಪ್‌, ಮಂಗಳವಾರದ ಮಾತುಕತೆ ಬಳಿಕ ಅವರೊಬ್ಬ ಅತ್ಯಂತ ಪ್ರತಿಭಾವಂತ ಮನುಷ್ಯ ಎಂದು ಮೆಚ್ಚುಗೆ ಸೂಚಿಸಿದ್ದು ವಿಶೇಷವಾಗಿತ್ತು. ಅಲ್ಲದೆ ಕಿಮ್‌ ಜಾಂಗ್‌ರನ್ನು ಸೂಕ್ತ ಸಮಯದಲ್ಲಿ ಅಮೆರಿಕದ ಶ್ವೇತಭವನಕ್ಕೆ ಆಹ್ವಾನಿಸುವುದಾಗಿಯೂ ಅವರು ಪ್ರಕಟಿಸಿದರು. ಸಮಯ ನೋಡಿಕೊಂಡು ತಾವು ಉತ್ತರ ಕೊರಿಯಾ ರಾಜಧಾನಿ ಪ್ಯೊಂಗ್‌ಯಾಂಗ್‌ಗೆ ಭೇಟಿ ನೀಡುವುದಾಗಿಯೂ ಹೇಳಿದರು.

ಎರಡೂ ದೇಶಗಳ ನಡುವೆ ಹೊಸ ಸಂಬಂಧ ಸ್ಥಾಪಿಸುವ ನಿಟ್ಟಿನಲ್ಲಿ ಹಾಗೂ ಕೊರಿಯಾ ಪರಾರ‍ಯಯ ದ್ವೀಪದಲ್ಲಿ ದೀರ್ಘಕಾಲಿನ ಮತ್ತು ಪ್ರಬಲ ಶಾಂತಿ ವ್ಯವಸ್ಥೆ ಸೃಷ್ಟಿಸುವ ಸಲುವಾಗಿ ಟ್ರಂಪ್‌ ಹಾಗೂ ಕಿಮ್‌ ಅವರು ಸಮಗ್ರ, ಆಳವಾದ ಹಾಗೂ ವಿಧೇಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಎಂದು ಟ್ರಂಪ್‌ ಹಾಗೂ ಕಿಮ್‌ ಅವರು ಸಹಿ ಹಾಕಿರುವ ಜಂಟಿ ಹೇಳಿಕೆ ಹೇಳುತ್ತದೆ.

ಮಾತುಕತೆಯ ಯಶಸ್ಸುಗಳು

ಕೊರಿಯಾ ಭರವಸೆ

1. ಉತ್ತರ ಕೊರಿಯಾ ತನ್ನ ಅಣ್ವಸ್ತ್ರಗಳನ್ನು ಸಂಪೂರ್ಣ ನಾಶಪಡಿಸಲಿದೆ.

2. ಕ್ಷಿಪಣಿ ಉಡ್ಡಯನ ತಾಣ, ಅಣ್ವಸ್ತ ಪರೀಕ್ಷಾ ಕೇಂದ್ರ ನಾಶ

3. ಸಂಬಂಧ ಸುಧಾರಣೆಗಾಗಿ ಉ.ಕೊರಿಯಾಕ್ಕೆ ಟ್ರಂಪ್‌ಗೆ ಆಹ್ವಾನ

ಅಮೆರಿಕ ಭರವಸೆ

1. ನಿಶ್ಯಸ್ತ್ರೀಕರಣಕ್ಕೆ ಪ್ರತಿಯಾಗಿ ಆ ದೇಶಕ್ಕೆ ಅಮೆರಿಕದಿಂದ ಭದ್ರತಾ ಖಾತ್ರಿ

2. ದಕ್ಷಿಣ ಕೊರಿಯಾ ಜತೆಗಿನ ಸಮರಾಭ್ಯಾಸ ಸ್ಥಗಿತಕ್ಕೆ ನಿರ್ಧಾರ

3. ಹೊಸದಾಗಿ ಹೇರಲು ಉದ್ದೇಶಿಸಿದ್ದ 30 ದಿಗ್ಭಂದನ ಹೇರಿಕೆ ಇಲ್ಲ

Follow Us:
Download App:
  • android
  • ios