ಕಾನೂನಾಯ್ತು ಶೇ.10 ಮೀಸಲಾತಿ: ರಾಷ್ಟ್ರಪತಿಯಿಂದ ಅಂಕಿತದ ಮಂಜೂರಾತಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Jan 2019, 8:01 PM IST
President Ram Nath Kovind gives nod to quota bill for General Category
Highlights

ಮೇಲ್ವರ್ಗದ ಬಡವರಿಗೆ ಶೇ. 10 ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅಂಕಿತ ಹಾಕಿದ್ದಾರೆ.

ನವದೆಹಲಿ, [ಜ.12]: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಶೇ. 10 ಮೀಸಲಾತಿ ಕಲ್ಪಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ.

ಸಂವಿಧಾನ ತಿದ್ದುಪಡಿ ಮಸೂದೆಗೆ ಬುಧವಾರ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿತ್ತು. ನಂತರ ಮಸೂದೆಯನ್ನು ರಾಷ್ಟ್ರಪತಿ ಅಂಕಿತಕ್ಕಾಗಿ ರಾಷ್ಟ್ರಪತಿ ಭವನಕ್ಕೆ ಕಳುಹಿಸಲಾಗಿತ್ತು. ಅದರಂತೆ [ಇಂದು] ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಸೂದೆಗೆ ಅಂಕಿತ ಹಾಕಿದ್ದಾರೆ.

ಮೇಲ್ವರ್ಗ ಮೀಸಲಾತಿ ಪಡೆಯಲು 3 ಮಾನದಂಡಗಳು, ಯಾರಿಗೆ ಲಾಭ? ಇಲ್ಲಿದೆ ಮಾಹಿತಿ

ಚಳಿಗಾಲದ ಸಂಸತ್​ ಅಧಿವೇಶನದ ವೇಳೆ ಪ್ರಧಾನಿ ಮೋದಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಯುವಕರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.10 ಮೀಸಲಾತಿಯ ಮಸೂದೆ ಕುರಿತ ನಿರ್ಣಯವನ್ನು ಕೈಗೊಂಡಿದ್ದರು. 

ಈ ಮೀಸಲಾತಿಗೆ ಕೆಲ ವಿರೋಧ ಪಕ್ಷಗಳ ನಾಯಕರು ಬೆಂಬಲ ಸೂಚಿಸಿದ್ದು, ಬಳಿಕ ರಾಜ್ಯಸಭೆಯಲ್ಲೂ ಈ ಮಸೂದೆ ಪಾಸ್ ಆಗಿತ್ತು.

loader