ಸಂಕ್ರಾಂತಿಯ ಶುಭಾಶಯಗಳೊಂದಿಗೆ ಬಜೆಟ್ ಅಧಿವೇಶನ ಉದ್ದೇಶಿಸಿ ಭಾಷಣ ಆರಂಭಿಸಿದ ರಾಷ್ಟ್ರಪತಿ ಕೋವಿಂದ್
ನವದೆಹಲಿ : ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಿದ್ದು, ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಿದ್ದಾರೆ.
ಗಣರಾಜ್ಯೋತ್ಸವ ಹಾಗೂ ಸಂಕ್ರಾಂತಿ ಶುಭಾಶಯಗಳೊಂದಿಗೆ ಭಾಷಣ ಆರಂಭಿಸಿದ್ದಾರೆ. ದೇಶದ ಜನರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬಜೆಟ್ ಮಂಡನೆ ಮಾಡಲಾಗುತ್ತದೆ. ಈ ವರ್ಷದ ಬಜೆಟ್ ದೇಶದ ಆರ್ಥಿಕತೆಗೆ ಮತ್ತಷ್ಟು ಬಲವನ್ನು ನೀಡಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ದೇಶದಲ್ಲಿ ಸಾಮಾಜಿಕ ನ್ಯಾಯ ಎನ್ನುವುದು ಮುಖ್ಯವಾದುದಾಗಿದೆ. ಶೌಚಾಲಯ ನಿರ್ಮಾಣವೂ ಕೂಡ ಸಾಮಾಜಿಕ ನ್ಯಾಯದ ಆಂದೋಲನವಾಗಿದೆ ಎಂದಿದ್ದಾರೆ. ಅಲ್ಲದೇ ಅಂಬೇಡ್ಕರ್ ಆಶಯಗಳ ಬಗ್ಗೆಯೂ ರಾಷ್ಟ್ರಪತಿ ಪ್ರಸ್ತಾಪಿಸಿದ್ದಾರೆ. ತ್ರಿವಳಿ ತಲಾಖ್ ಬಗ್ಗೆಯೂ ಕೂಡ ಮಾತನಾಡಿದರು.
ದೇಶದಲ್ಲಿ ಸೌದೆ ಉಪಯೋಗಿಸಿ ಅಡುಗೆ ಮಾಡುವ ಮಹಿಳೆಯರ ಕಷ್ಟದ ಬಗ್ಗೆ ಮಾತನಾಡಿ, ಈ ನಿಟ್ಟಿನಲ್ಲಿಯೇ ಪ್ರಧಾನಿ ಅವರು ಉಜ್ವಲ ಯೋಜನೆ ಜಾರಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ವೇತನ ಸಹಿತ ಹೆರಿಗೆ ರಜೆಯ ಬಗ್ಗೆಯೂ ಕೂಡ ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಬೇಟಿ ಬಚಾವೋ, ಬೇಟಿ ಪಡಾವೋ ಬಗ್ಗೆಯೂ ಕೂಡ ತಮ್ಮ ಮಾತುಗಳಲ್ಲಿ ರಾಷ್ಟ್ರಪತಿ ಉಲ್ಲೇಖಿಸಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸಾಕಷ್ಟು ಕ್ರಮ ಕೈಗೊಂಡಿದೆ. ಬಡತನದ ವಿರುದ್ಧ ಹೋರಾಡಲು ಅನೇಕ ಯೋಜನೆ ಜಾರಿ ತಂದಿಗೆ , ಸಾಲ ವಿತರಣೆ, ಜನ್’ಧನ್ ಯೋಜನೆಗಳನ್ನು ಜಾರಿ ಮಾಡಿದೆ ಎಂದಿದ್ದಾರೆ. ಅಲ್ಲದೇ ಕೃಷಿ ಕ್ಷೇತ್ರದ ಬಗ್ಗೆಯೂ ಕೂಡ ರಾಷ್ಟ್ರಪತಿ ಪ್ರಸ್ತಾಪಿಸಿದ್ದಾರೆ.
