Asianet Suvarna News Asianet Suvarna News

ಸಂಸತ್ತು ಕಲಾಪ: ಸರ್ಕಾರ, ವಿಪಕ್ಷಗಳ ವಿರುದ್ಧ ರಾಷ್ಟ್ರಪತಿ ಅಸಮಾಧಾನ

ಅಧಿವೇಶನ ಆರಂಭವಾಗಿ 17 ದಿನಗಳು ಕಳೆದಿದ್ದರೂ, ಸಂಸತ್ತು ಕಲಾಪಗಳು ನಿರಂತರವಾಗಿ ಮುಂದೂಡಲ್ಪಡುತ್ತಿದೆ.

President Expresses Concerns Over Session Adjournaments
  • Facebook
  • Twitter
  • Whatsapp

ನವದೆಹಲಿ (ಡಿ.08): ಸಂಸತ್ತಿನ ಚಳಿಗಾಲ ಅಧಿವೇಶನದ​​ ಕಲಾಪಗಳು ಸುಗಮವಾಗಿ ನಡೆಯದಿರುವುದಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದನದಲ್ಲಿ ಚರ್ಚಿಸಬೇಕಾದ ವಿಚಾರಗಳು ಸಾಕಷ್ಟಿವೆ, ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಚಿಂತಿಸಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಅಧಿವೇಶನ ಆರಂಭವಾಗಿ 17 ದಿನಗಳು ಕಳೆದಿದ್ದರೂ, ಸಂಸತ್ತು ಕಲಾಪಗಳು ನಿರಂತರವಾಗಿ ಮುಂದೂಡಲ್ಪಡುತ್ತಿದೆ.

ಸರ್ಕಾರದ ನೋಟು ನಿಷೇಧ ಕ್ರಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬಂದು ಸ್ಪಷ್ಟೀಕರಣ ನೀಡಬೇಕೆಂದು ಪ್ರತಿಪಕ್ಷಳು ಪಟ್ಟು ಹಿಡಿದಿವೆ.

Follow Us:
Download App:
  • android
  • ios