2012ರಿಂದ ಯುಪಿಎಸ್‌'ಸಿ ಸದಸ್ಯರಾಗಿದ್ದ ಡೇವಿಡ್ ಅವರನ್ನು ಯುಪಿಎಸ್‌'ಸಿಯ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ನವದೆಹಲಿ(ಜ.04): ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ದ ಮಧ್ಯಂತರ ಅಧ್ಯಕ್ಷರಾಗಿ ಡೇವಿಡ್ ಆರ್ ಸೈಮ್‌ಲೈಹ್ ಅವರನ್ನು ನೇಮಿಸಲಾಗಿದೆ. ಈ ಬಗ್ಗೆ ಸಂಪುಟ ಸಭೆ ಇಂದು ಅಧಿಕೃತ ಘೋಷಣೆ ಮಾಡಿದೆ.

ಮಧ್ಯಪ್ರದೇಶ ಕೇಡರ್‌'ನ ಮಾಜಿ ಐಎಎಸ್ ಅಧಿಕಾರಿ ಅಲ್ಕಾ ಸಿರೊಹಿ ಅವರ ಸ್ಥಾನಕ್ಕೆ ಡೇವಿಡ್ ಅವರನ್ನು ನೇಮಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅಂತಿಮಗೊಳಿಸಿದ್ದ ಡೇವಿಡ್ ಹೆಸರಿಗೆ ರಾಷ್ಟ್ರಪತಿ ಸಮ್ಮತಿ ಸೂಚಿಸಿದ್ದಾರೆ. ಡೇವಿಡ್ ಇಂದಿನಿಂದ ಜನವರಿ 21, 2018ರವರೆಗೆ ಅಧಿಕಾರದಲ್ಲಿರಲಿದ್ದಾರೆ.

2012ರಿಂದ ಯುಪಿಎಸ್‌'ಸಿ ಸದಸ್ಯರಾಗಿದ್ದ ಡೇವಿಡ್ ಅವರನ್ನು ಯುಪಿಎಸ್‌'ಸಿಯ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಡೇವಿಡ್ ಅವರು ಅರುಣಾಚಲ ಪ್ರದೇಶದ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದರು.