ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ತವರು ಕ್ಷೇತ್ರದಿಂದಲೇ ರಣ ಕಹಳೆ ಮೊಳಗಿಸಲು ಮುಂದಾಗಿರುವ ಜೆಡಿಎಸ್​, ರಾಜ್ಯಾಧ್ಯಕ್ಷ ಎಚ್​.ಡಿ. ಕುಮಾರಸ್ವಾಮಿ ಅವರ ಕುಮಾರಪರ್ವ ಬೃಹತ್​ ಸಮಾವೇಶಕ್ಕೆ  ಭರ್ಜರಿ ಸಿದ್ಧತೆ ನಡೆಸಿದೆ.

ಮೈಸೂರು (ನ.05): ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ತವರು ಕ್ಷೇತ್ರದಿಂದಲೇ ರಣ ಕಹಳೆ ಮೊಳಗಿಸಲು ಮುಂದಾಗಿರುವ ಜೆಡಿಎಸ್​, ರಾಜ್ಯಾಧ್ಯಕ್ಷ ಎಚ್​.ಡಿ. ಕುಮಾರಸ್ವಾಮಿ ಅವರ ಕುಮಾರಪರ್ವ ಬೃಹತ್​ ಸಮಾವೇಶಕ್ಕೆ ಭರ್ಜರಿ ಸಿದ್ಧತೆ ನಡೆಸಿದೆ.

ಇವತ್ತು ಜೆಡಿಎಸ್'​​ನ ನೂರಾರು ಕಾರ್ಯಕರ್ತರು ಬೈಕ್​ ರ್ಯಾಲಿ ಮೂಲಕ ಕುಮಾರಪರ್ವ ಪ್ರಚಾರಕ್ಕೆ ಹೊರಟರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಮಾಡಬೇಕೆಂದಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನವೆಂಬರ್​ 7 ರಂದು ಜೆಡಿಎಸ್​ ಕುಮಾರಪರ್ವ ಸಮಾವೇಶ ಆಯೋಜಿಸಿ ಸಿಎಂಗೆ ಸವಾಲೊಡ್ಡಿದೆ. ಅಂದು ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ಅಧಿದೇವತೆ ಚಾಮುಂಡೇಶ್ವರಿಗೆ ಕುಮಾರಸ್ವಾಮಿ ಪೂಜೆ ಸಲ್ಲಿಸಲಿದ್ದು, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಕುಮಾರಪರ್ವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಮಾತನಾಡಿದ ಶಾಸಕ ಜಿ.ಟಿ. ದೇವೇಗೌಡ ಹೋದಲ್ಲಿ ಬಂದಲ್ಲಿ ಮೋದಿಗೆ ನನ್ನ ಕಂಡರೆ ಭಯ ಎನ್ನುತ್ತಿರುವ ಸಿಎಂ ಸಿದ್ದರಾಮಯ್ಯ ಈಗ ಪ್ರಧಾನಿ ಕನಸು ಕಾಣುತ್ತಿದ್ದಾರೆ ಅಂತಾ ಟಾಂಗ್​ ನೀಡಿದರು.