ನವದೆಹಲಿ(ಸೆ.09): ಬಡ ಹಾಗೂ ಮಧ್ಯಮ ವರ್ಗದವರ ಜೀವನಾಡಿಯಾಗಿದ್ದ ರೈಲು ಪ್ರಯಾಣ ಕೂಡ ನಾಳೆಯಿಂದ ಭಾರೀ ದುಬಾರಿಯಾಗಲಿದೆ. ಯಾಕಂದ್ರೆ ಭಾರತೀಯ ರೈಲ್ವೆ ಇಲಾಖೆ ಕ್ರಿಯಾತ್ಮಕ ಪ್ರಯಾಣ ದರ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.

ರಾಜಧಾನಿ, ಶತಾಬ್ಧಿ ಎಕ್ಸ್ ಪ್ರೆಸ್ ಮತ್ತು ಡುರಂಟೋ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರು ಶೇ.10 ರಿಂದ ಶೇ.50 ರಷ್ಟು ಹೆಚ್ಚು ಹಣ ತೆರಬೇಕಾಗುತ್ತದೆ. ಆದರೆ ಪ್ರಥಮ ದರ್ಜೆ ಹವಾನಿಯಂತ್ರಿತ ಮತ್ತು ಎಕ್ಸಿಕ್ಯೂಟಿವ್‌ ಶ್ರೇಣಿಗಳಿಗೆ ಈಗ ಇರುವ ದರವೇ ಅನ್ವಯವಾಗಲಿದೆ. ರೈಲ್ವೆ ಟಿಕೆಟ್ ದರ ಏರಿಕೆಯ ಆದೇಶವನ್ನು ನರೇಂದ್ರ ಮೋದಿ ಆಡಳಿತದ ತುಘಲಕ್ ಆದೇಶ ಎಂದು ಕಾಂಗ್ರೆಸ್ ಪಕ್ಷ ಕರೆದಿದೆ. ಕೂಡಲೇ ಈ ನಿರ್ಣಯವನ್ನು ಹಿಂಪಡೆಯುವುದಕ್ಕೆ ಆಗ್ರಹಿಸಿದೆ.