ಹಿಂದಿನ ಆವೃತ್ತಿಗಳಂತೆ ಈ ಆವೃತ್ತಿಗಳಲ್ಲೂ ವಿವಿಧ ರಂಗದ ಗಣ್ಯರ ಜೊತೆ ಜನಸಾಮಾನ್ಯರು ಕಾಣಿಸಿಕೊಳ್ಳಲಿದ್ದಾರೆ.
ಭಾರತೀಯ ಕಿರುತೆರೆ ರಂಗದ ಜನಪ್ರಿಯ ಹಿಂದಿ ರಿಯಾಲಿಟಿ ಶೋ ಬಾಲಿವುಡ್ ನಟ ಸಲ್ಮಾನ್ ಖಾನ್ ಆಯೋಜಿಸಿಕೊಡುವ ಬಿಗ್'ಬಾಸ್'ನ 11ನೇ ಆವೃತ್ತಿ ಶುರುವಾಗುವ ದಿನಾಂಕ ನಿಗದಿಯಾಗಿದೆ.
ಅಕ್ಟೋಬರ್ 1 ರಿಂದ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ. ಹಿಂದಿ ವಾಹಿನಿ ಕಲರ್ಸ್'ನಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾದವರೆಗೆ ರಾತ್ರಿ 10ರಿಂದ 11ರವರೆಗೆ ಹಾಗೂ ಭಾನುವಾರ 9 ರಿಂದ 10ರವರೆಗೆ ಪ್ರಸಾರವಾಗಲಿದೆ. ಹಿಂದಿನ ಆವೃತ್ತಿಗಳಂತೆ ಈ ಆವೃತ್ತಿಗಳಲ್ಲೂ ವಿವಿಧ ರಂಗದ ಗಣ್ಯರ ಜೊತೆ ಜನಸಾಮಾನ್ಯರು ಕಾಣಿಸಿಕೊಳ್ಳಲಿದ್ದಾರೆ. ಇನ್ನೊಂದು ಸುದ್ದಿಯೇನೆಂದರೆ ಈ ಬಾರಿ 2 ಮನೆಯಿರಲಿದೆ. ವಿಜೇತರಿಗೆ ಮಾತ್ರವಲ್ಲ ಟಾಸ್ಕ್'ನಲ್ಲಿ ಗೆಲುವು ಸಾಧಿಸಿದವರಿಗೂ ಬಹುಮಾನವಿರುತ್ತದೆ.

