ಬಾದಾಮಿಯಲ್ಲಿ ದಶಕದ ಬಳಿಕ ಪುನಾರಂಭಗೊಂಡಿರುವ ಚಾಲುಕ್ಯ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ಧೂರಿಯಾಗಿ ಚಾಲನೆ ನೀಡಿದರು. ಉತ್ಸವಕ್ಕೆ ಹೆಚ್ಚುವರಿಯಾಗಿ ₹1 ಕೋಟಿ ಅನುದಾನ ಘೋಷಿಸಿದ ಅವರು, ಈ ಹಿಂದೆ ತಮ್ಮನ್ನು ಗೆಲ್ಲಿಸಿದ್ದ ಬಾದಾಮಿ ಕ್ಷೇತ್ರದ ಜನತೆಯ ಉಪಕಾರವನ್ನು ಸ್ಮರಿಸಿದರು.
ಬಾಗಲಕೋಟೆ: 2025-26ರ ಬಜೆಟ್‌ನಲ್ಲಿ ಮಾಡಿದ ಘೋಷಣೆಯಂತೆ ಬಾದಾಮಿಯ ಐತಿಹಾಸಿಕ ಪರಂಪರೆ ಸಾರುವ ‘ಚಾಲುಕ್ಯ ಉತ್ಸವ’ಕ್ಕೆ ಚಾಲನೆ ನೀಡಲು ಸಂತಸವಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರ ಬಿಟ್ಟು ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆದ್ದ ಸಿದ್ದರಾಮಯ್ಯ, ಎರಡೂವರೆ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸೋಮವಾರ ಬಾದಾಮಿಗೆ ಆಗಮಿಸಿದರು.
ನಾಡಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಇಂತಹ ಉತ್ಸವಗಳು ನಿರಂತರವಾಗಿ ನಡೆಯಲಿ ಎಂಬ ಭಾವನೆ ನಮ್ಮ ಸರ್ಕಾರದ್ದಾಗಿದೆ ಎಂದು ಹೇಳಿದ ಸಿಎಂ, ಸದ್ಯ ಉತ್ಸವಕ್ಕೆ ₹3 ಕೋಟಿ ನೀಡಿದ್ದೆ. ಇನ್ನೂ ₹1 ಕೋಟಿಯ ಅಗತ್ಯವಿದೆ ಎಂದು ಹೇಳಿದ್ದು, ಆ ಹಣ ನೀಡುವುದಾಗಿ ಘೋಷಿಸಿದರು. ನಾನು ಮುಖ್ಯಮಂತ್ರಿಯಾಗಿ ಈ ಎರಡು ವರ್ಷದಲ್ಲಿ ಬಾದಾಮಿ ಕ್ಷೇತ್ರಕ್ಕೆ ಸುಮಾರು ₹2000 ಕೋಟಿ ರೂ.ಗಳ ಅನುದಾನವನನ್ನು ನೀಡಿದ್ದೇನೆ ಎಂದರು.
ಬಾದಾಮಿ ಕ್ಷೇತ್ರದ ಜನರ ಉಪಕಾರ ಮರೆಯಲ್ಲ
ಐದು ವರ್ಷಗಳ ಕಾಲ ಬಾದಾಮಿ ಕ್ಷೇತ್ರದ ಶಾಸಕನಾಗಿದ್ದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಐದು ಬಾರಿ ಗೆದ್ದಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತೆ. ಆದರೆ, ಬಾದಾಮಿ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸಿದರು ಎನ್ನುವುದನ್ನು ಮರೆಯಲು ಸಾಧ್ಯವಿಲ್ಲ. ಬಾದಾಮಿ ಕ್ಷೇತ್ರಕ್ಕೆ ಬಂದು ಎರಡು ಅಥವಾ ಮೂರು ಬಾರಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿ ಜನರ ಆಶೀರ್ವಾದ ಬೇಡಿರಬಹುದು. ಇಲ್ಲಿನ ಜನರು ದೊಡ್ಡ ಮನಸ್ಸು ಮಾಡಿ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದರಿಂದ ವರುಣಾ ಕ್ಷೇತ್ರದಲ್ಲಿ ಗೆದ್ದು ಮತ್ತೆ ಸಿಎಂ ಆಗಲು ಸಾಧ್ಯವಾಯಿತು ಎನ್ನುವುದನ್ನು ಮರೆಯಲಾಗುವುದಿಲ್ಲ. ನಿಮ್ಮ ಉಪಕಾರವನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಚಾಲುಕ್ಯ ಉತ್ಸವ ಒಂದು ದಶಕದಿಂದ ನಡೆದಿರಲಿಲ್ಲ. ಉತ್ಸವ ಆರಂಭಕ್ಕೆ ಮುಖ್ಯಮಂತ್ರಿಗಳು ಆಸಕ್ತಿ ತೋರಿದ್ದರ ಪರಿಣಾಮ ಇಂದು ಇಷ್ಟು ಅದ್ಧೂರಿಯಾಗಿ ಉತ್ಸವ ನಡೆಯುತ್ತಿದೆ ಎಂದು ಹೇಳಿದರು.
ಚಾಲುಕ್ಯ ಉತ್ಸವಕ್ಕೆ ಅದ್ಧೂರಿ ಚಾಲನೆ
ಐತಿಹಾಸಿಕ ಬಾದಾಮಿಯ ಚಾಲುಕ್ಯ ಉತ್ಸವಕ್ಕೆ ಸೋಮವಾರ ಸಂಜೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಚಾಲುಕ್ಯ ಪರಂಪರೆ ಮತ್ತೆ ಜಗತ್ತಿಗೆ ಸಾರುವ ಪ್ರಯತ್ನದ ಭಾಗವಾಗಿರುವ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಸ್ರಾರು ಅಭಿಮಾನಿಗಳ ಮಧ್ಯೆ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.
ನಾಡಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಇಂತಹ ಉತ್ಸವಗಳು ನಿರಂತರವಾಗಿ ನಡೆಯಲಿ ಎಂಬ ಭಾವನೆ ನಮ್ಮ ಸರ್ಕಾರದ್ದಾಗಿದೆ ಎಂದು ಹೇಳಿದ ಸಿಎಂ, ಸದ್ಯ ಉತ್ಸವಕ್ಕೆ ₹3 ಕೋಟಿ ನೀಡಿದ್ದೆ. ಇನ್ನೂ ₹1 ಕೋಟಿಯ ಅಗತ್ಯವಿದೆ ಎಂದು ಹೇಳಿದ್ದು, ಆ ಹಣ ಸಹ ನೀಡುವುದಾಗಿ ಘೋಷಿಸಿದರು.
ಇದನ್ನೂ ಓದಿ: ಯೋಗ ಕೊನೆಯಾಗುವ ದಿನಗಳು ಸಮೀಪಿಸಿವೆ: ಸಿಎಂ ಸಿದ್ದರಾಮಯ್ಯ ವಿರುದ್ದ ನಟ ಜಗ್ಗೇಶ್ ಬೇಸರ
ಸರ್ಕಾರದಿಂದ ಸರ್ವಧರ್ಮಗಳ ಸಮನ್ವಯತೆ ಪಾಲನೆ
ಚಾಲುಕ್ಯರು ನಿರ್ಮಿಸಿದ ದೇಗುಲಗಳ ವಾಸ್ತುಶಿಲ್ಪದ ಮಹತ್ವ ಅರಿಯುವ ಉದ್ದೇಶವನ್ನು ಚಾಲುಕ್ಯ ಉತ್ಸವ ಹೊಂದಿದೆ. ಬಾದಾಮಿ ಐಹೊಳೆ ಪಟ್ಟದಕಲ್ಲುಗಳ ವೈಭವವನ್ನು ವೀಕ್ಷಿಸಲು ದೇಶವಿದೇಶಗಳಿಂದ ಜನರು ಬರುತ್ತಾರೆ. ಚಾಲುಕ್ಯರ ಆಡಳಿತ ವೈಖರಿಯಂತೆ ನಮ್ಮ ಸರ್ಕಾರವೂ ಸರ್ವಧರ್ಮಗಳ ಸಮನ್ವಯತೆ ಪಾಲಿಸುತ್ತದೆ. ನಾನು ಮುಖ್ಯಮಂತ್ರಿಯಾಗಿ ಈ ಎರಡು ವರ್ಷದಲ್ಲಿ ಬಾದಾಮಿ ಕ್ಷೇತ್ರಕ್ಕೆ ಸುಮಾರು ₹2 ಸಾವಿರ ಕೋಟಿ ರೂ.ಗಳ ಅನುದಾನವನನ್ನು ನೀಡಿದ್ದೇನೆ ಎಂದರು.


