ನವದೆಹಲಿ (ಸೆ.24) ತನ್ನ ಪತಿ ನೋಡಲು ಚೆನ್ನಾಗಿಲ್ಲ ಎಂದು ಪತ್ನಿಯೊಬ್ಬಳು ಆತನಿಗೆ ಕಿಸ್ ಮಾಡುತ್ತಲೇ ಅರ್ಧ ನಾಲಿಗೆ ಕಚ್ಚಿ ತುಂಡರಿಸಿದ್ದಾಳೆ. ನವದೆಹಲಿಯ ರಾನ್ ಹೋಲಾ ಭಾಗದಲ್ಲಿ ಶನಿವಾರ ಇಂಥ ಘಟನೆ ನಡೆದಿದೆ.

ಎಂಟು ತಿಂಗಳ ಗರ್ಭಿಣಿಯಾಗಿರುವ ಪತ್ನಿ, ತನ್ನ ಪತಿ ನೋಡಲು ಚೆನ್ನಾಗಿಲ್ಲ ಎಂದು ಆತನ ಜೊತೆ ಯಾವಾಗಲೂ ಜಗಳವಾಡುತ್ತಿದ್ದಳು. ಹಾಗಾಗಿ ಆಕೆ ಪತಿಗೆ ಕಿಸ್ ಮಾಡುತ್ತಲೇ ನಾಲಿಗೆ ಕಚ್ಚಿದ್ದಾಳೆ. ಪತಿ ತನ್ನ ಅರ್ಧ ನಾಲಿಗೆಯನ್ನೇ ಕಳೆದುಕೊಂಡಿದ್ದಾನೆ. ಈ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಪದೇ ಪದೇ ಜಗಳವಾಡುತ್ತಿದ್ದರು ನಂತರ ಸರಿಯಾಗುತ್ತಿದ್ದರು.

ಇದೇ ರೀತಿ ಶನಿವಾರ ರಾತ್ರಿ ಹಾಸಿಗೆಯಲ್ಲಿ ಒಂದಾಗಿದ್ದ ವೇಳೆ ಇದ್ದಕ್ಕಿದ್ದಂತೆ ಆಕ್ರೋಶಗೊಂಡ ಪತ್ನಿ ಪತಿಯ ನಾಲಿಗೆ ಕತ್ತರಿಸಿದ್ದಾಳೆ. 2016ರ ನವೆಂಬರ್ ನಲ್ಲಿ  ವಿವಾಹವಾಗಿದ್ದ ಜೋಡಿ ಜಗಳವಾಡುತ್ತಲೆ ಸಂಸಾರ ಮಾಡಿಕೊಂಡು ಬಂದಿತ್ತು.