ಪುರುಷರು ಮಕ್ಕಳನ್ನು ಹೆರುವುದು ಸಾಧ್ಯವಿಲ್ಲವೆಂಬ ಮಾತು ಸುಳ್ಳಾಗಿ ಹಲವು ವರ್ಷಗಳೇ ಆಯಿತು. ಇದೀಗ ನಂಬಿಕೆ ಸುಳ್ಳಾಗಿಸುವ ಅಂಥದ್ದೇ ಸದ್ದಿ ಬ್ರಿಟನ್’ನಿಂದ ಬಂದಿದೆ. ಆದರೆ ಹಿಂದಿನ ಪ್ರಕರಣಕ್ಕೆ ಹೋಲಿಸಿದರೆ ಇದು ಸ್ವಲ್ಪ ವಿಭಿನ್ನ.
ಲಂಡನ್ (ಜು, 10): ಪುರುಷರು ಮಕ್ಕಳನ್ನು ಹೆರುವುದು ಸಾಧ್ಯವಿಲ್ಲವೆಂಬ ಮಾತು ಸುಳ್ಳಾಗಿ ಹಲವು ವರ್ಷಗಳೇ ಆಯಿತು. ಇದೀಗ ನಂಬಿಕೆ ಸುಳ್ಳಾಗಿಸುವ ಅಂಥದ್ದೇ ಸದ್ದಿ ಬ್ರಿಟನ್’ನಿಂದ ಬಂದಿದೆ. ಆದರೆ ಹಿಂದಿನ ಪ್ರಕರಣಕ್ಕೆ ಹೋಲಿಸಿದರೆ ಇದು ಸ್ವಲ್ಪ ವಿಭಿನ್ನ. ಇಲ್ಲಿ ಮಹಿಳೆಯೊಬ್ಬರು ಪುರುಷನಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡು, ಕೊನೆಗೂ ಮನಸ್ಸು ಬದಲಾಯಿಸಿ, ಗರ್ಭ ಧರಿಸುವ ಮೂಲಕ ಹೆಣ್ಣುಮಗುವೊಂದನ್ನು ಹೆತ್ತಿದ್ದಾರೆ.
ನಿಜ, ಬ್ರಿಟನ್’ನಲ್ಲಿ 21 ವರ್ಷದ ಪುರುಷನೊಬ್ಬ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಾನೆ. ಮೂಲತ: ಹೆಣ್ಣಾಗಿ ಜನಿಸಿದ್ದ ಹೇಡನ್ ಕ್ರಾಸ್, ಬಳಿಕ ಲಿಂಗ ಪರಿವರ್ತೆನೆ ಚಿಕಿತ್ಸೆ ಪಡೆದುಕೊಣಂಡು ಗಂಡಾಗಿದ್ದರು.
ಆದರೆ ಈ ಚಿಕಿತ್ಸೆ ಪೂರ್ಣಗೊಳ್ಳುವ ಮೊದಲೆ ಆತನಿಗೆ ಮಕ್ಕಳನ್ನು ಹೆರುವ ಮನಸ್ಸಾಗಿತ್ತು. ಹೀಗಾಗಿ ಗರ್ಭಕೋಶವನ್ನು ಉಳಿಸಿಕೊಂಡಿದ್ದರು. ದಾನಿಯೊಬ್ಬನಿಂದ ವೀರ್ಯ ಪಡೆದು ಗರ್ಭ ಧರಿಸಿದ್ದ ಹೇಡನ್ ಜೂ. 16ರಂದು ಗ್ಲಾಸ್ಟರ್’ಶೈರ್ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣುಮಗುವಿಗೆ ಸಿಸೇರಿಯನ್ ಮೂಲಕ ಜನ್ಮ ನೀಡಿದ್ದಾನೆ. ಬ್ರಿಟನ್’ನಲ್ಲಿ ಲಿಂಗಪರಿವರ್ತನೆಗೊಂಡ ಪುರುಷನೊಬ್ಬ ಮಗುವಿಗೆ ಜನ್ಮ ನೀಡಿದ್ದು ಇದೇ ಮೊದಲು.
