ಸಿಂಹದಂತೆ ಘರ್ಜಿಸುತ್ತಿದ್ದ ಸಂಘೀ ಈಗ ಏಕಾಂಗಿ! ಪತ್ರಕರ್ತರೆದುರು ಕಣ್ಣೀರು

First Published 23, Jan 2018, 9:35 AM IST
Praveen Togadia Sacked
Highlights

ಕತ್ತರಿಸುತ್ತೇನೆ ಸುಮ್ಮನೆ ಬಿಡೋಲ್ಲ... ಬಾಬರ್ ಕಿ ಔಲಾದ್... ಸ್ವಯಮೇವ ಮೃಗೇಂದ್ರಃ ಎಂದು ಬೊಬ್ಬಿರಿದು ಮಾತನಾಡುತ್ತಲೇ ಪ್ರಸಿದ್ಧಿ ಪಡೆದ ಪ್ರವೀಣ್ ತೊಗಾಡಿಯಾ ಕಣ್ಣೀರು ಹಾಕುತ್ತಾ ಅಹಮದಾಬಾದ್‌ನ ಪತ್ರಕರ್ತರ ಎದುರು ಕಾಣಿಸಿಕೊಂಡಾಗ ಪತ್ರಕರ್ತರು ದಿಗಿಲಾಗಿದ್ದರೂ ಬಿಜೆಪಿ ನಾಯಕರು ಮತ್ತು ಸಂಘದ ಶೀರ್ಷ ನೇತೃತ್ವ ಮಾತ್ರ ಆಶ್ಚರ್ಯಗೊಂಡಿರಲಿಲ್ಲ. ಇದು ಇವತ್ತಲ್ಲಾ ನಾಳೆ ನಡೆಯಲೇಬೇಕಾಗಿದ್ದ ಘಟನೆ ಬಿಡಿ ಎಂಬ ರೀತಿಯಲ್ಲಿಯೇ ಆಫ್ ದಿ ರೆಕಾರ್ಡ್ ಪ್ರತಿಕ್ರಿಯೆಗಳು ಕೇಳಿಬರುತ್ತಿದ್ದವು.

ಬೆಂಗಳೂರು (ಜ.23): ಕತ್ತರಿಸುತ್ತೇನೆ ಸುಮ್ಮನೆ ಬಿಡೋಲ್ಲ... ಬಾಬರ್ ಕಿ ಔಲಾದ್... ಸ್ವಯಮೇವ ಮೃಗೇಂದ್ರಃ ಎಂದು ಬೊಬ್ಬಿರಿದು ಮಾತನಾಡುತ್ತಲೇ ಪ್ರಸಿದ್ಧಿ ಪಡೆದ ಪ್ರವೀಣ್ ತೊಗಾಡಿಯಾ ಕಣ್ಣೀರು ಹಾಕುತ್ತಾ ಅಹಮದಾಬಾದ್‌ನ ಪತ್ರಕರ್ತರ ಎದುರು ಕಾಣಿಸಿಕೊಂಡಾಗ ಪತ್ರಕರ್ತರು ದಿಗಿಲಾಗಿದ್ದರೂ ಬಿಜೆಪಿ ನಾಯಕರು ಮತ್ತು ಸಂಘದ ಶೀರ್ಷ ನೇತೃತ್ವ ಮಾತ್ರ ಆಶ್ಚರ್ಯಗೊಂಡಿರಲಿಲ್ಲ. ಇದು ಇವತ್ತಲ್ಲಾ ನಾಳೆ ನಡೆಯಲೇಬೇಕಾಗಿದ್ದ ಘಟನೆ ಬಿಡಿ ಎಂಬ ರೀತಿಯಲ್ಲಿಯೇ ಆಫ್ ದಿ ರೆಕಾರ್ಡ್ ಪ್ರತಿಕ್ರಿಯೆಗಳು ಕೇಳಿಬರುತ್ತಿದ್ದವು.

2005 ರಲ್ಲಿ ಸಂಜಯ್ ಭಾಯಿ ಜೋಶಿ ಅವರ ಸುಳ್ಳು ಲೈಂಗಿಕ ಸೀಡಿ ಹೊರಗೆ ಬರುವುದರೊಂದಿಗೆ ಆರಂಭವಾಗಿದ್ದ ಗುಜರಾತ್ ಸಂಘ ಪರಿವಾರದ ಸಮಕಾಲೀನರ ಜಗಳ ತೊಗಾಡಿಯಾ ಅಳುವುದರೊಂದಿಗೆ ಬಹುತೇಕ ಅಂತ್ಯವಾಗಿದೆ. ಸಂಜಯ್ ಜೋಶಿ ಪ್ರಕರಣದಲ್ಲಿ ನರೇಂದ್ರ ಮೋದಿ ಪರವಾಗಿ ಒಲ್ಲದ ಮನಸ್ಸಿನಿಂದ ನಿಂತುಕೊಂಡಂತೆ ಕಾಣುತ್ತಿದ್ದ ನಾಗ್ಪುರದ ಸಂಘ ನಾಯಕತ್ವ, ತೊಗಾಡಿಯಾ ಪ್ರಕರಣದಲ್ಲಿ ಮಾತ್ರ ಸ್ವಯಂಪ್ರೇರಿತವಾಗಿ ಮೋದಿ ಹಿಂದೆ ನಿಂತುಕೊಂಡಿದ್ದನ್ನು ನೋಡಿ  ಬೇರೆ ದಾರಿಕಾಣದೆ ಪ್ರವೀಣ್ ಭಾಯಿ ಎನ್ಕೌಂಟರ್ ಕಥೆ ಹೆಣೆದರು. ಸಂಘ ಪರಿವಾರದಲ್ಲಿ 40  ವರ್ಷಗಳ ಕೆಲಸದ ಬಳಿಕ ಅಕ್ಷರಶಃ ಏಕಾಂಗಿಯಾಗಿರುವುದೇ ತೊಗಾಡಿಯಾ ಗಳಗಳನೆ ಕಣ್ಣೀರು ಹಾಕುವುದಕ್ಕೆ ಕಾರಣ ಎಂದು ಅವರ ಆಪ್ತರೇ ಹೇಳುತ್ತಿದ್ದಾರೆ.

 -ಇಂಡಿಯಾ ಗೇಟ್, ಪ್ರಶಾಂತ್ ನಾತು

ಇಂಡಿಯಾ ಗೇಟ್'ನ ಓದಿಗಾಗಿ ಇಲ್ಲಿ ಕ್ಲಿಕ್ಕಿಸಿ

 

loader