ಕೆಲವೊಂದು ವಿಚಾರಗಳು ಮನಸ್ಸನ್ನು ಘಾಸಿಗೊಳಿಸಿವೆ.
ಬೆಂಗಳೂರು(ಏ.08): ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಬಿಗ್ ಬಾಸ್ ವಿನ್ನರ್ ಪ್ರಥಮ್ ಕಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಸಂದರ್ಭದಲ್ಲಿ ಆತ್ಮಹತ್ಯೆ ಹಾಗೂ ಮತ್ತೊಬ್ಬರು ಬಿಗ್ ಬಾಸ್ ಸ್ಪರ್ಧಿಯಾದ ಸಂಜನಾ ಸಂಬಂಧದ ಬಗ್ಗೆಯೂ ಸ್ಪಷ್ಟಪಡಿಸಿದ್ದಾರೆ.
'ನಾನು ದುಡುಕಿ ಆತ್ಮಹತ್ಯೆಗೆ ಯತ್ನಿಸಿದ್ದೆ, ಈಗ ತಪ್ಪಿನ ಅರಿವಾಗಿದೆ, ಇನ್ಮುಂದೆ ಹೀಗೆ ಮಾಡುವುದಿಲ್ಲ. ಕೆಲವೊಂದು ವಿಚಾರಗಳು ಮನಸ್ಸನ್ನು ಘಾಸಿಗೊಳಿಸಿವೆ. ಯಾವ ಹುಡುಗಿಯರ ಜೊತೆಯೂ ಸಂಬಂಧ ಇಲ್ಲ. ನನಗೆ ಯಾವುದೇ ಕ್ರಿಕೆಟ್ ಬೆಟ್ಟಿಂಗ್ ಹುಚ್ಚಿಲ್ಲ. ನನ್ನ ಬಗ್ಗೆ ಯಾವುದೇ ವದಂತಿ ಹಬ್ಬಿಸಬೇಡಿ. ಬಿಗ್ ಬಾಸ್ನಲ್ಲಿ ಗೆದ್ದ ಹಣ ಇನ್ನೂ ನನ್ನ ಕೈಸೇರಿಲ್ಲ. ಹಣ ಬಂದರೆ ಪ್ರಧಾನಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ಹಣ, ಉಳಿದ ಹಣ ಗ್ರಾಮದ ವಿದ್ಯುತ್ ದೀಪ ಅಳವಡಿಕೆಗೆ ಕೊಡುವೆ.
ಖಾಸಗಿ ಜೀವನಕ್ಕೆ ಧಕ್ಕೆಯಾಗುವ ವಿಚಾರಗಳನ್ನು ಪ್ರಸಾರ ಮಾಡಬೇಡಿ. ನನ್ನಿಂದ ಯಾರಿಗಾದರೂ ತೊಂದರೆ ಆಗಿದ್ದರೆ ಕ್ಷಮಿಸಿ. ನಾನು ಯಾವುದೇ ಸಾಲವನ್ನು ಮಾಡಿಕೊಂಡಿಲ್ಲ.ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದೆ.ಇನ್ನು ಮುಂದಿನ ದಿನ ಈ ರೀತಿ ಆಗೋದಿಲ್ಲ. ಇಲ್ಲಸಲ್ಲದ ವಂದತಿಗಳಿಂದ ಮನಸಿಗೆ ತುಂಬಾ ನೋವಾಗಿದೆ.ಬಿಗ್ ಬಾಸ್ ಸ್ಪರ್ಧಿ ಸಂಜನಾ ಜೊತೆ ನನಗೆ ಯಾವುದೇ ಸಂಬಂಧವಿಲ್ಲ. ಯಾವುದೇ ವದಂತಿಗಳನ್ನು ಹಬ್ಬಿಸಬೇಡಿ'ಎಂದು ತಿಳಿಸಿದರು.
