Asianet Suvarna News Asianet Suvarna News

ಮುಂದುವರೆದ ಪ್ರಥಮ್ ಹೈಡ್ರಾಮ: ಪೋರ್ಟೀಸ್'ನ ಐಸಿಯು ಉಡೀಸ್ ಈಗ ನಿಮ್ಹಾನ್ಸ್'ನಿಂದ ಕಿಮ್ಸ್'ಗೆ ಶಿಫ್ಟ್

ತನಗೆ ಮಾನಸಿಕವಾಗಿ ನೋವಾಗಿದೆ ಎಂದು ಫೆಸ್ಬುಕ್​​ ಲೈವ್ನಲ್ಲಿ ನಿದ್ರೆ ಮಾತ್ರೆ ನುಂಗಿದ್ದ ಪ್ರಥಮ್​​​, ಪೋರ್ಟೀಸ್ಆಸ್ಪತ್ರೆ ಐಸಿಯೂದಲ್ಲಿ ಬೆತ್ತಲಾಗಿ ರಂಪಾಟ ನಡೆಸಿದ್ದಾನೆ, ನಿನ್ನೆ ಮಧ್ಯಾಹ್ನವೇ ಪ್ರಥಮ್ರಂಪಾಟ ಕಂಡು ಆಸ್ಪತ್ರೆಯಿಂದ ಕರೆಯೊಯ್ಯುವಂತೆ ಪೋರ್ಟಿಸ್ಆಸ್ಪತ್ರೆ ವೈದ್ಯರು ಸೂಚಿಸಿದ್ದರು.

Pratham High drama Continue
  • Facebook
  • Twitter
  • Whatsapp

ಬೆಂಗಳೂರು(ಏ.06): ಬಿಗ್​​ ಬಾಸ್​​ ವಿನ್ನರ್ ಪ್ರಥಮ್ ಹುಚ್ಚಾಟ ಹೆಚ್ಚಾಗಿದ್ದು, ಇಂದೂ ಕೂಡ ಹೈಡ್ರಾಮ ಮುಂದುವರೆದಿದೆ. ಪೋರ್ಟೀಸ್​ ಐಸಿಯೂ ಉಡೀಸ್​ ಮಾಡಿ ಆಸ್ಪತ್ರೆ ಹೊರಬಿದ್ದ ಪ್ರಥಮ್,​​​ ನಿಮ್ಹಾನ್ಸ್​ಗೆ​​​ ಹೋಗಿ ಕೊನೆಗೆ ಕಿಮ್ಸ್​​ ಅಡ್ಮಿಟ್​ ಆಗಿದ್ದಾನೆ.

ಮಾನಸಿಕ ಒತ್ತಡಕ್ಕೆ ಒಳಗಾಗಿ ನಿದ್ರೆ ಮಾತ್ರೆ ನುಂಗಿ ಆಸ್ಪತ್ರೆ ಸೇರಿರುವ ಬಿಗ್​​ಬಾಸ್​ ಪ್ರಥಮ್​​​ ಹುಚ್ಚಾಟ ಮಿತಿಮೀರಿದೆ. ಐಸಿಯೂದಲ್ಲಿದ್ದರೂ ವೈದ್ಯರ ಮಾತು ಕೇಳದೇ ರಂಪಾಟ ಮಾಡಿ ಪೋರ್ಟೀಸ್​​ನಿಂದ ಹೊರ ಬಿದ್ದು ಆಸ್ಪತ್ರೆ ಕಿಮ್ಸ್​ ಆಸ್ಪತ್ರೆಯಲ್ಲಿ ಐಸಿಯೂದಲ್ಲಿ ಮಲಗಿದ್ದಾನೆ.

ತನಗೆ ಮಾನಸಿಕವಾಗಿ ನೋವಾಗಿದೆ ಎಂದು ಫೆಸ್​ಬುಕ್​​ ಲೈವ್​ನಲ್ಲಿ ನಿದ್ರೆ ಮಾತ್ರೆ ನುಂಗಿದ್ದ ಪ್ರಥಮ್​​​, ಪೋರ್ಟೀಸ್​ ಆಸ್ಪತ್ರೆ ಐಸಿಯೂದಲ್ಲಿ ಬೆತ್ತಲಾಗಿ ರಂಪಾಟ ನಡೆಸಿದ್ದಾನೆ, ನಿನ್ನೆ ಮಧ್ಯಾಹ್ನವೇ ಪ್ರಥಮ್​ ರಂಪಾಟ ಕಂಡು ಆಸ್ಪತ್ರೆಯಿಂದ ಕರೆಯೊಯ್ಯುವಂತೆ ಪೋರ್ಟಿಸ್​ ಆಸ್ಪತ್ರೆ ವೈದ್ಯರು ಸೂಚಿಸಿದ್ದರು. ಆದ್ರೆ ಪೋಷಕರ ಒತ್ತಯದ ಮೇರೆಗೆ ಚಿಕಿತ್ಸೆ ಮುಂದುವರೆಸಲಾಗಿತ್ತು. ರಾತ್ರಿ ವೇಳೆ ಹುಚ್ಚಾಟ ಮತ್ತೆ ಶುರು ಮಾಡಿದ್ದ ಪ್ರಥಮ್​​ ಪೊಲೀಸರು ಬಂದ ವೇಳೆ ಬಾತ್​​ರೂಂ ಸೇರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಆತಂಕಗೊಂಡ ಪೊಲೀಸರು ಬಾಗಿಲು ಹೊಡೆದು ಪ್ರಥಮ್​ನನ್ನು ರಕ್ಷಿಸಿದರು. ನಂತರ ಪೋರ್ಟಿಸ್​ ವೈದ್ಯರು ನಿಮಾನ್ಸ್​ಗೆ ಕರೆದೊಯ್ಯುವಂತೆ ಸೂಚಿಸಿದರು. ಬೆಳಗಿನ ಜಾವ 4 ಗಂಟೆಗೆ ನಿಮ್ಹಾನ್ಸ್​ಗೆ ಕರೆದೊಯ್ದ ವೇಳೆ ಪ್ರಥಮ್​​ ಮತ್ತೆ ರಂಪಾಟ ಮಾಡಿದ್ದರಿಂದ ಕಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕಿಮ್ಸ್​ ವೈದ್ಯರು ಪ್ರಥಮ್​ ಜೊತೆ ಮಾತನಾಡಲು ಯತ್ನಿಸಿದ್ದು, ತಾನು 20 ಮಾತ್ರೆ ನುಂಗಿರುವುದಾಗಿ ಹೇಳುತ್ತಿದ್ದಾನೆ, 20 ಮಾತ್ರೆ ನುಂಗಿದರೆ, ಉಸಿರಾಟದ ತೊಂದರೆ, ವಾಂತಿ ಆಗಬೇಕು. ಆ ರೀತಿಯ ಯಾವ ಲಕ್ಷಣಗಳು ಕಾಣುತ್ತಿಲ್ಲ. ಪ್ರಥಮ್​​ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರುವುದರಿಂದ ಇಂಜಕ್ಷನ್​​ ನೀಡಿ ನಿದ್ರೆ ಮಾಡಲು ಬಿಟ್ಟು, ಅಬ್ಸರ್ವೇಷನ್ ಮಾಡುತ್ತಿದ್ದೇವೆ. ಆದರೆ ಯಾವುದೇ ಪ್ರಾಣಾಪಾಯ ಇಲ್ಲ ಎಂದು ಖಚಿತಪಡಿಸಿದ್ದಾರೆ.

ಆದರೆ, ಕಿಮ್ಸ್​ನಲ್ಲಿಯೂ ವೈದ್ಯರ ಜೊತೆ ಮಾತನಾಡಲು ನಿರಾಕರಿಸಿದ್ದಾನೆ. ಆತ ಹೇಳುತ್ತಿರುವುದಕ್ಕೂ, ಲಕ್ಷಣಗಳಿಗೂ ಯಾವುದೇ ತಾಳೆ ಇಲ್ಲದ ಕಾರಣ ಕಿಮ್ಸ್​ ವೈದ್ಯರ ಕನ್ಫೂಸ್​ ಆಗಿದ್ದಾರೆ. ಈ ಮಧ್ಯೆ ಪ್ರಥಮ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಆತ್ಮಹತ್ಯೆ ಪ್ರಕರಣ  ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow Us:
Download App:
  • android
  • ios