ಮೈಸೂರು ಅಂದ್ರೆ ಟಿಪ್ಪು ನೆನಪಾಗ್ತಾನೆ; ಕರಾವಳಿ ಅಂದ್ರೆ ಯಾಸೀನ್ ಭಟ್ಕಳ್ ನೆನಪಾಗ್ತಾನೆ: ಪ್ರತಾಪ್ ಸಿಂಹ

Pratap Simha Slams CM Siddaramaiah
Highlights

ಮೈಸೂರು ಅಂದ್ರೆ ಈಗ ಟಿಪ್ಪು ಸುಲ್ತಾನ್ ನೆನಪಾಗುತ್ತಾನೆ. ಕರಾವಳಿ ಅಂದ್ರೆ ಯಾಸೀನ್ ಭಟ್ಕಳ್ ನೆನಪಾಗುತ್ತಾನೆ.  ನಾಲ್ಕು ಕಟ್ಟಡ ಕಟ್ಟಿ ಸಿದ್ದರಾಮಯ್ಯ ನಾನೇ ಮುಂದಿನ ಮಹಾರಾಜ ಅಂತಾ ವರ್ತಿಸುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ. 

ಬೆಂಗಳೂರು (ಮಾ.11): ಮೈಸೂರು ಅಂದ್ರೆ ಈಗ ಟಿಪ್ಪು ಸುಲ್ತಾನ್ ನೆನಪಾಗುತ್ತಾನೆ. ಕರಾವಳಿ ಅಂದ್ರೆ ಯಾಸೀನ್ ಭಟ್ಕಳ್ ನೆನಪಾಗುತ್ತಾನೆ.  ನಾಲ್ಕು ಕಟ್ಟಡ ಕಟ್ಟಿ ಸಿದ್ದರಾಮಯ್ಯ ನಾನೇ ಮುಂದಿನ ಮಹಾರಾಜ ಅಂತಾ ವರ್ತಿಸುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ. 

ಯಡಿಯೂರಪ್ಪ ಸಿಎಂ ಆಗಿದ್ದಾಗ ಬರಾಕ್ ಒಬಾಮ ಕೂಡ ನಮ್ಮ ರಾಜ್ಯದ ಇಂಜಿನಿಯರ್ಸ್’ಗಳ ಚಾಕಚಕ್ಯತೆ ನೋಡಿ ಹೆದರುತ್ತಿದ್ದರು. ರಾಜ್ಯಕ್ಕೆ ಕೊಡುಗೆ‌ ನೀಡಿದ ಸರ್ಕಾರ ನಮ್ಮ ಬಿಜೆಪಿ ಸರ್ಕಾರ. ಆದರೆ ಸಿದ್ದರಾಮಯ್ಯ ಸರ್ಕಾರದಿಂದ ಇಡೀ ರಾಜ್ಯಕ್ಕೆ ಕಳಂಕ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.  ವೈಟ್ ಟಾಪಿಂಗ್ ಹೆಸರಿನಲ್ಲಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಸಿದ್ದರಾಮಯ್ಯ ಯಾವಾಗಲೂ ನಾನು ನನ್ನದು ಎಂದು ಬೀಗುತ್ತಾರೆ.  ರಾವಣನೂ ಸಹ ಹೀಗೆಯೇ ಬೀಗುತ್ತಿದ್ದ. ಕೊನೆಗೇನಾಯಿತು ಎಂದು   ಬಿಜೆಪಿ ಪಾದಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. 


 

loader