ಮೋದಿ ಕಾರ್ಯಕ್ರಮ ಆಹ್ವಾನ ಪತ್ರಿಕೆಗಳಲ್ಲಿ ಸಿಎಂ ಹೆಸರು ಕೈ ಬಿಟ್ಟಿರುವ ವಿಚಾರವಾಗಿ  ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಹರಿಹಾಯ್ದಿದ್ದಾರೆ. 

ಬೆಂಗಳೂರು (ಫೆ.17): ಮೋದಿ ಕಾರ್ಯಕ್ರಮ ಆಹ್ವಾನ ಪತ್ರಿಕೆಗಳಲ್ಲಿ ಸಿಎಂ ಹೆಸರು ಕೈ ಬಿಟ್ಟಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಹರಿಹಾಯ್ದಿದ್ದಾರೆ. 

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನಾನೇ ಇನ್ನೂ ನೋಡಿಲ್ಲ. ಆದರೆ ಸಿದ್ದರಾಮಯ್ಯ ಅವರಿಗೆ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಮಾತನಾಡುವ ಕನಿಷ್ಟ ನೈತಿಕತೆಯೂ ಇಲ್ಲ. ಕೇಂದ್ರದ ಅನುದಾನದಲ್ಲಿ ಜಿಲ್ಲೆಯಲ್ಲಿ ನಡೆದ ಹಲವು ಅಭಿವೃದ್ಧಿ ಕಾರ್ಯಗಳನ್ನು ಕದ್ದು ಮುಚ್ಚಿ ಉದ್ಘಾಟನೆ ಮಾಡಿದ್ದಾರೆ. ಅದರಲ್ಲಿ ಸ್ಥಳಿಯ ಸಂಸದನಾಗಲಿ, ಸಂಬಂಧಪಟ್ಟ ಕೇಂದ್ರ ಸಚಿವರನ್ನು ಕರೆಯುವ ಸೌಜನ್ಯವನ್ನೂ ತೋರಿಲ್ಲ. ಒಬ್ಬ ಪ್ರಧಾನಿ ರಾಜ್ಯದಲ್ಲೇ ಮೈಸೂರಿಗೆ ಹೆಚ್ಚು ಅನುಧಾನ ಕೊಟ್ಟಿರುವುದು ಅದು ಮೋದಿ ಮಾತ್ರ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.