ಪ್ರತಾಪ್​ ಸಿಂಹ ವಿರುದ್ಧ  ಪ್ರಕಾಶ್ ರೈ ಆರೋಪ ವಿಚಾರವಾಗಿ  ಮೈಸೂರಿನಲ್ಲಿ ಸಂಸದ ಪ್ರತಾಪ್​ ಸಿಂಹ ಸುದ್ದಿಗೋಷ್ಠಿ ನಡೆಸಿ,  ಬಿಜೆಪಿ ವಿರುದ್ಧ ಹೋರಾಟ ಮಾಡುವ ತಾಕತ್ತು ಪ್ರಕಾಶ್​ ರೈಗಿಲ್ಲ.  ಯಾವತ್ತೂ ಪ್ರಕಾಶ್​ ರೈ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿಲ್ಲ. ವೈಯಕ್ತಿಕ ವಿಚಾರ ಬಗ್ಗೆ ಮಾತನಾಡಿದ್ದರೆ ಸಾಕ್ಷಿ ನನಗೆ ತೋರಿಸಲಿ. ನನ್ನ ಟ್ವೀಟ್​​ ಬಗ್ಗೆ ನಾನು ಬದ್ಧನಾಗಿದ್ದೇನೆ. ಬೇರೆಯವರ ಟ್ವೀಟ್​ಗೆ ನಾನು ಹೊಣೆಯಲ್ಲ ಎಂದು ಪ್ರತಾಪ್​ ಸಿಂಹ ಹೇಳಿದ್ದಾರೆ.

ಮೈಸೂರು (ನ.23): ಪ್ರತಾಪ್​ ಸಿಂಹ ವಿರುದ್ಧ ಪ್ರಕಾಶ್ ರೈ ಆರೋಪ ವಿಚಾರವಾಗಿ ಮೈಸೂರಿನಲ್ಲಿ ಸಂಸದ ಪ್ರತಾಪ್​ ಸಿಂಹ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ವಿರುದ್ಧ ಹೋರಾಟ ಮಾಡುವ ತಾಕತ್ತು ಪ್ರಕಾಶ್​ ರೈಗಿಲ್ಲ. ಯಾವತ್ತೂ ಪ್ರಕಾಶ್​ ರೈ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿಲ್ಲ. ವೈಯಕ್ತಿಕ ವಿಚಾರ ಬಗ್ಗೆ ಮಾತನಾಡಿದ್ದರೆ ಸಾಕ್ಷಿ ನನಗೆ ತೋರಿಸಲಿ. ನನ್ನ ಟ್ವೀಟ್​​ ಬಗ್ಗೆ ನಾನು ಬದ್ಧನಾಗಿದ್ದೇನೆ. ಬೇರೆಯವರ ಟ್ವೀಟ್​ಗೆ ನಾನು ಹೊಣೆಯಲ್ಲ ಎಂದು ಪ್ರತಾಪ್​ ಸಿಂಹ ಹೇಳಿದ್ದಾರೆ.

ಪ್ರಕಾಶ್ ರೈಗೆ ಭಯವಿದ್ದರೆ ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ ಬಳಿ ಹೋಗಲಿ. ಸೂಕ್ತ ರಕ್ಷಣೆ ನೀಡುವಂತೆ ಗೃಹ ಸಚಿವರ ಮುಂದೆ ಕೇಳಲಿ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವಿಶ್ವವೇ ಮಾತನಾಡುತ್ತಿದೆ. ಇಂತಹ ಪ್ರಧಾನಿ ಮೋದಿ ವಿರುದ್ಧ ಮಾತನಾಡುವುದು ಸರಿಯೇ? ನನ್ನ ವಿರುದ್ಧವೇ ಹೋರಾಡಲು ಪ್ರಕಾಶ್ ಪ್ರಕಾಶ್​​ ರೈಗೆ ಆಗಲ್ಲ. ಬಿಜೆಪಿ ವಿರುದ್ಧ ಹೋರಾಟ ಮಾಡುವ ಶಕ್ತಿ ಇದೆಯೇ? ಎಂದು ಪ್ರತಾಪ್ ಸಿಂಹ ಕೇಳಿದ್ದಾರೆ.