ಫಿಟ್’ನೆಸ್ ಸವಾಲು ಸ್ವೀಕರಿಸಿದ ಸಂಸದ ಸಿಂಹ

First Published 26, May 2018, 12:29 PM IST
Pratap Simha Accepts Fitness Challenge
Highlights

ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಹಾಕಿದ್ದ ಫಿಟ್‌ನೆಸ್ ಸವಾಲನ್ನು ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಸ್ವೀಕರಿಸಿ ತಮ್ಮ ಫಿಟ್‌ನೆಸ್ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. 

ಮೈಸೂರು[ಮೇ.26]: ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಹಾಕಿದ್ದ ಫಿಟ್‌ನೆಸ್ ಸವಾಲನ್ನು ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಸ್ವೀಕರಿಸಿ ತಮ್ಮ ಫಿಟ್‌ನೆಸ್ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. 

ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಮೇ 22ರಂದು ‘ಹಮ್ ಫಿಟ್ ತೋ ದೇಶ್ ಫಿಟ್’. ನೀವು ನಿಮ್ಮ ಫಿಟ್‌ನೆಸ್‌ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ’ ಎಂದು ಹೇಳಿ ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್‌ನೆಸ್ ಸವಾಲು ಹಾಕಿ ಟ್ವೀಟ್ ಮಾಡಿದ್ದರು. 

ಈ ಸವಾಲನ್ನು ಹಲವರು ಸ್ವೀಕರಿಸಿದ್ದರು. ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಕೂಡ ತನ್ನ ಫೆವರೇಟ್ ವರ್ಕೌಟ್ ವಿಡಿಯೋವನ್ನು ಟ್ವೀಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇದರ ಬೆನ್ನಲ್ಲೇ ಪ್ರತಾಪ್ ಸಿಂಹ ಕೂಡ ತಮ್ಮ ಸದೃಢ ದೇಹದ ಫೋಟೋವನ್ನು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.

loader