2014 ಅ.28ರಂದು ಸೂರ್ಯ ಪ್ರಕಾಶ್ ಪ್ರಸಾರ ಭಾರತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.

ನವದೆಹಲಿ(ಅ.28): ಪ್ರಸಾರ ಭಾರತಿ ಮುಖ್ಯಸ್ಥ ಹುದ್ದೆಯಿಂದ ಕನ್ನಡಿಗ ಅರಕಲಗೂಡು ಸೂರ್ಯ ಪ್ರಕಾಶ್ ಅವರು ಶುಕ್ರವಾರ ನಿವೃತ್ತರಾಗಿದ್ದಾರೆ.

2014 ಅ.28ರಂದು ಸೂರ್ಯ ಪ್ರಕಾಶ್ ಪ್ರಸಾರ ಭಾರತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.

ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಶಿಫಾರಸಿನ ಮೇರೆಗೆ ಮೂರು ವರ್ಷಗಳ ಅವಧಿಗೆ ಸೂರ್ಯಪ್ರಕಾಶ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಸೂರ್ಯ ಪ್ರಕಾಶ್ ಅವರು ಹಾಸನ ಜಿಲ್ಲೆಯ ಅರಕಲಗೂಡಿನವರಾಗಿದ್ದಾರೆ.

ಪ್ರಸಾರ ಭಾರತಿ ಅಧ್ಯಕ್ಷರ ಅಧಿಕಾರವಧಿ ಮೂರು ವರ್ಷಗಳಾಗಿದ್ದು, ಮುಂದಿನ ಅಧ್ಯಕ್ಷರು ಯಾರು ಎನ್ನುವ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.