ಪ್ರ್ಯಾಂಕ್ ವಿಡಿಯೋಗಳನ್ನು ಮಾಡುವ ರಷ್ಯಾದ ತಂಡವೊಂದು ಇತ್ತೀಚೆಗಷ್ಟೇ ಬಾತ್ ಟಬ್ ತುಂಬಾ ನಾಣ್ಯಗಳನ್ನು ಕೊಂಡೊಯ್ದು ಆ್ಯಪಲ್ ಐಫೋನ್ XS ಖರೀದಿಸಿದೆ. 

ಎಲ್ಲರಿಗಿಂತ ಭಿನ್ನವಾಗಿ ಏನನ್ನಾದರೂ ಮಾಡಲೇ ಬೇಕೆಂದು ಬಯಸಿದ್ದ ರಷ್ಯಾದ ಯುವಕರ ಗುಂಪೊಂದು ಆ್ಯಪಲ್‌ ಸ್ಟೋರ್‌ಗೆ ಬಾತ್‌ಟಬ್‌ನಲ್ಲಿ 1 ಲಕ್ಷ ರೂಬಲ್‌ (ನಾಣ್ಯ) ಒಯ್ದು, ಐಫೋನ್‌ ಎಕ್ಸ್‌ಎಸ್‌ ಖರೀದಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
View post on Instagram

ಇದರ ತೂಕವೇ 350 ಕೆ.ಜಿ.ಯಷ್ಟಿದ್ದು, ಭದ್ರತಾ ಸಿಬ್ಬಂದಿ ಒಳಗೆ ಬಿಡಲು ನಿರಾಕರಿಸಿದ್ದಾರೆ. ಬಳಿಕ ಒಂದಷ್ಟುಜಗಳ ನಡೆದು ಅಂಗಡಿ ಮಾಲೀಕರು ಐಫೋನ್‌ ಕೊಡಲು ಒಪ್ಪಿದ್ದಾರೆ.

ಈ ನಾಣ್ಯಗಳನ್ನು ಎಣಿಸಲು ಸಿಬ್ಬಂದಿಗೆ 2 ಗಂಟೆ ಬೇಕಾಗಿದ್ದು, ಅಂತೂ ಇಂತೂ ಕೋವೆಲೆಂಕೊ ಎಂಬಾತ ಐಫೋನ್‌ ಪಡೆದುಕೊಂಡಿದ್ದಾನೆ.