ಕರ್ನಾಟಕ ರಾಜಕಾರಣದಲ್ಲಿ ಸಂಚಲನ; ರಾಜಕೀಯ ಸೇರಲು ಗಣ್ಯ ವ್ಯಕ್ತಿ ರೆಡಿ..!

Pramodadevi Likely To Join Politics
Highlights

  • ರಾಜಕೀಯ ಪ್ರವೇಶಿಸಿ ಜನಸೇವೆ ಮಾಡಲು ಗಣ್ಯ ವ್ಯಕ್ತಿಯೊಬ್ಬರು ರೆಡಿ
  • ಯಾವ ಪಕ್ಷ ಸೇರ್ತಾರೆ ರಾಜಮಾತೆ..?

ಬೆಂಗಳೂರು: ರಾಜಕೀಯ ಪ್ರವೇಶಿಸಿ ಜನಸೇವೆ ಮಾಡಲು ಗಣ್ಯ ವ್ಯಕ್ತಿಯೊಬ್ಬರು ರೆಡಿಯಾಗಿದ್ದಾರೆ.

ಈ ಬಗ್ಗೆ ತನ್ನ ಮನದಾಳವನ್ನು ಆಪ್ತರೊಂದಿಗೆ ಹಂಚಿಕೊಂಡಿರುವ ಮೈಸೂರು ರಾಜವಂಶದ ರಾಜಮಾತೆ ಪ್ರಮೋದಾದೇವಿಯವರು,  ಜನಸೇವೆ ಮಾಡಲು ರಾಜಕೀಯ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಸುವರ್ಣನ್ಯೂಸ್’ಗೆ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಸುವರ್ಣ ನ್ಯೂಸ್’ಗೆ ಸಿಕ್ಕರುವ EXCLUSIVE ಮಾಹಿತಿ ಪ್ರಕಾರ, ರಾಜಕೀಯ ಸೇರಿದರೆ ಹೇಗೆ ಎಂದು ಆಪ್ತರೊಂದಿಗೆ ಚರ್ಚಿಸಿರುವ ಪ್ರಮೋದಾದೇವಿ, ಯಾವ ಪಕ್ಷಕ್ಕೆ ಸೇರಿದರೆ ಉತ್ತಮವೆಂದು ಲೆಕ್ಕಾಚಾರ ಹಾಕಿದ್ದಾರೆನ್ನಲಾಗಿದೆ.

ಯಾವ ಪಕ್ಷ ಸೇರ್ತಾರೆ ರಾಜಮಾತೆ..?

ರಾಜಕೀಯಕ್ಕೆ ಬರುವ ಹಿಂದೆ ಜನಸೇವೆ ಹಾಗೂ ಮೈಸೂರು ರಾಜಮನೆತನದ ಆಸ್ತಿರಕ್ಷಣೆಯ ಲೆಕ್ಕಾಚಾರವಿದೆ ಎನ್ನಲಾಗಿದೆ. ಆದುದರಿಂದ ಯಾವಾಗ, ಯಾವ ರಾಜಕೀಯ ಪಕ್ಷ ಸೇರಬೇಕೆಂದು ಚರ್ಚೆಯನ್ನು ಅವರು ನಡೆಸಿದ್ದಾರೆ.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಸೇರ್ಪಡೆ ಕುರಿತಾಗಿ ಚರ್ಚೆ ನಡೆಸಿದ್ದು, ಯಾವ ಪಕ್ಷ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂಬ ಲೆಕ್ಕಾಚಾರ ಹಾಕಿದ್ದಾರೆನ್ನಲಾಗಿದೆ. ಇತ್ತೀಚೆಗೆ ಅಧಿಕೃತವಾಗಿ ಯಾವ ಪಕ್ಷವೂ ಆಹ್ವಾನಿಸಿದ ಮಾಹಿತಿ ಇಲ್ಲ.

ರಾಜಮಾತೆಗೆ JDS ಹಾಗೂ BJP ಗಾಳ..!

ರಾಜ ಮಾತೆ ಪ್ರಮೋದಾ ದೇವಿ ಪಕ್ಷಕ್ಕೆ ಸೇರಿಸಿಕೊಳ್ಳಲು ಪಕ್ಷಗಳು ಗಾಳ ಹಾಕುತ್ತಿವೆ. ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಯತ್ನಿಸುತ್ತಿದ್ದಾರೆ.

2013ರ ಡಿಸೆಂಬರ್ ನಲ್ಲಿ ಮಹಾರಾಜ ನಿಧನಾನಂತರ ರಾಜಕೀಯಕ್ಕೆ ಬರಲ್ಲವೆಂದಿದ್ದರು ಪ್ರಮೋದಾ ದೇವಿ.

loader