ಮೋದಿಗೆ ಮುತಾಲಿಕ್ ಸವಾಲ್!

Pramod Mutalik Urges Modi to Answer to His Questions
Highlights

ಮೇ 1 ರಂದು ಚಿಕ್ಕೋಡಿ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ  ಶ್ರಿ ರಾಮಸೇನೆ 5 ಪ್ರಶ್ನೆಗಳನ್ನು ‌ಮುಂದೆ ಇಟ್ಟಿದ್ದು ಅದಕ್ಕೆ ಉತ್ತರಿಸುವಂತೆ ಶ್ರಿರಾಮೇಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್  ಆಗ್ರಹಿಸಿದ್ದಾರೆ. 

ಬೆಳಗಾವಿ (ಏ.29):  ಮೇ 1 ರಂದು ಚಿಕ್ಕೋಡಿ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ  ಶ್ರಿ ರಾಮಸೇನೆ 5 ಪ್ರಶ್ನೆಗಳನ್ನು ‌ಮುಂದೆ ಇಟ್ಟಿದ್ದು ಅದಕ್ಕೆ ಉತ್ತರಿಸುವಂತೆ ಶ್ರಿರಾಮೇಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್  ಆಗ್ರಹಿಸಿದ್ದಾರೆ. 

ಡಾ! ಪ್ರವೀಣ ತೋಗಾಡಿಯಾರವರು 32 ವರ್ಷ ಮನೆ ಮಠ ಸಂಸಾರ ಆಸ್ಪತ್ರೆ ತ್ಯಜಿಸಿ ದೇಶ ಸೇವೆಗೈದ ಪ್ರಖರ ಹಿಂದೂವಾದಿಯನ್ನು ವಿಎಚ್’ಪಿಯಿಂದ ಉಚ್ಚಾಟಿಸಿದ್ದು ಯಾಕೆ ?

ಕೇಂದ್ರದಲ್ಲಿ ಸಂಪೂರ್ಣ ಬಹುಮತ ಇದ್ದು ನಾಲ್ಕು ವರ್ಷ ಅಧಿಕಾರ ಕಳೆದರೂ ಅಯೋಧ್ಯೆಯಲ್ಲಿ ಶ್ರಿರಾಮನ ಜನ್ಮಸ್ಥಾನ ಮಂದಿರ ನಿರ್ಮಾಣ ಯಾಕೆ ಮಾಡಿಲ್ಲ?

ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಯಾವತ್ತು ಮಾಡುವಿರಾ? ಕಾಶ್ಮೀರ ಹಿಂದುಗಳನ್ನು ಕಾಶ್ಮೀರದಿಂದ ಹೊರಹಾಕಿ 29 ವರ್ಷ ಕಳೆದರೂ ಅವರಿಗೆ ಕಾಶ್ಮೀರದಲ್ಲಿ ಪುನರ್ವಸತಿ ಯಾಕೆ ಕಲ್ಪಿಸಿಲ್ಲ?  ಕಾಶ್ಮೀರ ಹಿಂದೂಗಳ ಪುನರ್ ವಸತಿ  ಯಾವಾಗ ?

ದೇಶದಲ್ಲಿ 5 ಕೋಟಿಗಿಂತ ಹೆಚ್ಚು ಬಾಂಗ್ಲಾದೇಶಿಯ ಮುಸ್ಲಿಂಮರು ಅಕ್ರಮವಾಗಿ ನೆಲಸಿದ್ದಾರೆ. ಅವರನ್ನು ಭಾರತದಿಂದ ಎಂದು ಹೊರಹಾಕುವಿರಿ? ಎಂದು ಶ್ರಿರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್’ರವರು ಪ್ರಕಟಣೆಯಲ್ಲಿ ಮೋದಿಯವರಿಗೆ ಪ್ರಶ್ನೆಯನ್ನು ಹಾಕಿ ಉತ್ತರಿಸುವಂತೆ ಒತ್ತಾಯಿಸಿದ್ದಾರೆ.

loader