ತೇರದಾಳ/ ಶೃಂಗೇರಿ ಕ್ಷೇತ್ರದಿಂದ ಪ್ರಮೋದ್ ಮುತಾಲಿಕ್ ಸ್ಪರ್ಧೆ?

First Published 3, Apr 2018, 2:41 PM IST
Pramod Mutalik May Contest from Sringeri or Teradala Constituency
Highlights

ಶ್ರೀರಾಮ ಸೇನೆ ಶಿವಸೇನೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ.  ಈ ಬಾರಿ ಚುನಾವಣೆಯಲ್ಲಿ ಶಿವಸೇನೆ ನೇತೃತ್ವದಲ್ಲಿ  60 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ಚಿಕ್ಕಮಗಳೂರಿನಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

ಬೆಂಗಳೂರು (ಏ. 03):  ಶ್ರೀರಾಮ ಸೇನೆ ಶಿವಸೇನೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ.  ಈ ಬಾರಿ ಚುನಾವಣೆಯಲ್ಲಿ ಶಿವಸೇನೆ ನೇತೃತ್ವದಲ್ಲಿ  60 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ಚಿಕ್ಕಮಗಳೂರಿನಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

ಸಿದ್ದಲಿಂಗ ಸ್ವಾಮೀಜಿ ಜೇವರ್ಗಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ.  ನಾನು ಶೃಂಗೇರಿ ಅಥವಾ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ.  ಈ ಬಗ್ಗೆ ಎರಡು ದಿನಗಳಲ್ಲಿ ಅಂತಿಮ ನಿರ್ಧಾರ ಮಾಡುತ್ತೇನೆ.  ಹಿಂದುತ್ವ ನಮ್ಮ ಪ್ರಮುಖ ಅಜಂಡಾ. 
ಬಿಜೆಪಿಯದ್ದು ಡೋಂಗಿ ಹಿಂದುತ್ವ.  ಬಿಜೆಪಿ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ.  ನಾವು ಹಿಂದುತ್ವಕ್ಕಾಗಿ ರಾಜಕೀಯ ಮಾಡುತ್ತೇವೆ.  ಕೇಂದ್ರದಲ್ಲಿ  ಬಿಜೆಪಿ ಸರ್ಕಾರ ಇದ್ದರೂ  ಭಾರತ ಗೋ ಮಾಂಸ ಸಾಗಾಟದಲ್ಲಿ ನಂಬರ್ 1 ಆಗಿದೆ.  ಅನಂತ್ ಕುಮಾರ್ ಗೋ ಮಾಂಸ ನಿಷೇಧದ ಬಗ್ಗೆ ಡೋಂಗಿ ಮಾತನಾಡುತ್ತಾರೆ.  ಗೋ ಮಾಂಸ ನಿಷೇಧ ಎನ್ನುವುದು ಬಿಜೆಪಿಯ ಬೂಟಾಟಿಕೆ ಎಂದು ಮುತಾಲಿಕ್  ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ದತ್ತಪೀಠವೂ ಗೋ ಮಾಂಸ ನಿಷೇಧದ ಹಾಗೆ.   ದತ್ತ ಪೀಠವನ್ನು ಸಹ ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ.  ಸಿಟಿ ರವಿ ಇದೇ ದತ್ತಪೀಠ ವಿವಾದದಿಂದ ಮೂರು ಬಾರಿ ಶಾಸಕರಾಗಿದ್ದಾರೆ.  ದತ್ತಪೀಠ ಗುಹೆ ಕಟ್ಟಲಾಗದ ಸಿ ಟಿ ರವಿ 8 ಕೋಟಿ ಖರ್ಚು ಮಾಡಿ ತಮ್ಮ ಮನೆ ಕಟ್ಟಿಕೊಂಡಿದ್ದಾರೆ ಎಂದಿದ್ದಾರೆ.   

ಮಾಲೀಕಯ್ಯ ಗುತ್ತೇದಾರ್ ಬಿಜೆಪಿ ಸೇರ್ಪಡೆಗೆ ಮುತಾಲಿಕ್  ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ನೂರಾರು ಮಸೀದಿಯನ್ನು ಕಟ್ಟಿದವನನ್ನು ಬಿಜೆಪಿಗೆ ಕರೆತಂದದ್ದು ಯಾಕೆ?  ಮಾಲೀಕಯ್ಯ ಗುತ್ತೇದಾರ್’ರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಯಾರಿಗೆ ಪಾಠ ಹೇಳಲು ಹೊರಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ. 
 

loader