ಮೋದಿ – ಷಾ ವಿರುದ್ಧ ಮತ್ತೆ ಗುಡುಗಿದ ಪ್ರಕಾಶ್ ರೈ

First Published 10, Mar 2018, 4:27 PM IST
Prakash Rai Slams PM Modi
Highlights

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ  ವಿರುದ್ಧ ಪ್ರಕಾಶ್ ರೈ ಮತ್ತೆ ಗುಡುಗಿದ್ದಾರೆ. ಭಾರತವನ್ನು ನಾವು ಎತ್ತ ಸಾಗಲು ಬಿಟ್ಟಿದ್ದೇವೆ. ಷಾ ಹಾಗೂ ಮೋದಿ ಇಬ್ಬರೂ ಕೂಡ ಸುಳ್ಳರು, ಅವರು ದಿನಕ್ಕೆ ನೂರು ಸುಳ್ಳನ್ನು ಹೇಳುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಚುನಾವಣೆಯಲ್ಲಿ ಕಪ್ಪು ಹಣ ಬೇಡ ಎನ್ನುವ ಅವರು ಕಪ್ಪು ಹಣವನ್ನೇ  ಪಕ್ಷದ ಪ್ರಚಾರಕ್ಕೆ ಬಳಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು :  ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ  ವಿರುದ್ಧ ಪ್ರಕಾಶ್ ರೈ ಮತ್ತೆ ಗುಡುಗಿದ್ದಾರೆ. ಭಾರತವನ್ನು ನಾವು ಎತ್ತ ಸಾಗಲು ಬಿಟ್ಟಿದ್ದೇವೆ. ಷಾ ಹಾಗೂ ಮೋದಿ ಇಬ್ಬರೂ ಕೂಡ ಸುಳ್ಳರು, ಅವರು ದಿನಕ್ಕೆ ನೂರು ಸುಳ್ಳನ್ನು ಹೇಳುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಚುನಾವಣೆಯಲ್ಲಿ ಕಪ್ಪು ಹಣ ಬೇಡ ಎನ್ನುವ ಅವರು ಕಪ್ಪು ಹಣವನ್ನೇ  ಪಕ್ಷದ ಪ್ರಚಾರಕ್ಕೆ ಬಳಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಂಬೇಡ್ಕರ್ ಗಾಂಧಿ ಎಂದು ಹೇಳುವ ಅವರಲ್ಲಿ ಸಾಮಾಜಿಕವಾದ ನ್ಯಾಯ ಎನ್ನುವುದೇ ಇಲ್ಲ. ಮೋದಿಯನ್ನು ಮೊದಲು ಓಡಿಸಿ ನಾವು ಒಂದಾಗಬೇಕು ಎಂದಿದ್ದಾರೆ.

ಅಲ್ಲದೇ ಅನಂತ್ ಕುಮಾರ್ ಹಗಡೆ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು ಯಾವಾಗಲೂ ರಕ್ತ ರಕ್ತ ಎಂದು ಜಪಿಸುತ್ತಾರೆ ಎಂದು ಹೇಳಿದ್ದಾರೆ. ಹೀಗಾದಲ್ಲಿ ಒಂದು ಬಾರಿ ಆಸ್ಪತ್ರೆಗೆ ಹೋದಾಗ ಅಲ್ಲಿ ಅವರ ಬ್ಲಡ್ ಗ್ರೂಪ್ ಯಾವುದು ಎಂದಾಗಲೇ ಅವರಿಗೆ ಅರಿವು ಮೂಡುತ್ತದೆ ಎಂದು ಹೇಳಿದ್ದಾರೆ.

loader