ಕರ್ನಾಟಕದಿಂದ ಕೋಮುವಾದಿಗಳನ್ನು ಒದ್ದೋಡಿಸಿ : ಪ್ರಕಾಶ್ ರೈ

First Published 15, Mar 2018, 1:26 PM IST
Prakash Rai slams BJP
Highlights

ಕಾಸರಗೋಡಿನ ಹೊಸಂಗಡಿಯಲ್ಲಿ ನಟ ಪ್ರಕಾಶ್ ರೈ ಸಮಕಾಲಿನ ವಿಚಾರಗಳು ಎಂಬ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ಕಾಸರಗೋಡು : ಕಾಸರಗೋಡಿನ ಹೊಸಂಗಡಿಯಲ್ಲಿ ನಟ ಪ್ರಕಾಶ್ ರೈ ಸಮಕಾಲಿನ ವಿಚಾರಗಳು ಎಂಬ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ಈ ವೇಳೆ ಮಾತನಾಡಿದ ಅವರು ಗೋ ಮಾತೆಗಳೆಲ್ಲಾ ಸೇರಿ  ಓಟ್ ಬ್ಯಾಂಕ್ ಆಗಿ, ಓಟ್  ಹಾಕಿದ್ದು,  ಈ ಓಟ್’ನಿಂದ ಮಿಸ್ಟರ್ ಯೋಗಿಯವರ ಸ್ಥಿತಿ ಹೇಗಿದೆ ಎಂದು ಗೊತ್ತಾಗಿದೆ ಎಂದು ಉತ್ತರ ಪ್ರದೇಶದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ವ್ಯಂಗ್ಯವಾಡಿದ್ದಾರೆ.

ನಾನಂತೂ ನನ್ನ ವಿರೋಧ ಪಕ್ಷ ಬಿಜೆಪಿ ಎಂದು ಘೋಷಿಸಿದ್ದೇನೆ. ಹೀಗೆಂದ ಮಾತ್ರಕ್ಕೆ ಬಲಪಂಥೀಯ ವಿರೋಧಿ ಎಂದುಕೊಳ್ಳಬೇಡಿ. ನಿಮ್ಮನ್ನು ನಂಬಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಬಿಜೆಪಿಯನ್ನು ಬರಲು ಬಿಡಬೇಡಿ. 

ಕುಮಾರಸ್ವಾಮಿ ಅವರ ಜೆಡಿಎಸ್ ಪಕ್ಷದ ವಿಚಾರದಲ್ಲಿಯೂ ಕೂಡ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ. ಕೋಮುವಾದಿಗಳೊಂದಿಗೆ  ಮೈತ್ರಿ ಮಾಡಿಕೊಂಡು ನಿಮ್ಮ ಮತ ಮಾರಾಟಕ್ಕೆ ಇಡಬೇಕು. ಕೋಮುವಾದಿಗಳನ್ನು ಬೇರು ಸಹಿತವಾಗಿ ಕಿತ್ತು ಒದ್ದೋಡಿಸುವ ಕೆಲಸ ಮಾಡಿ ಎಂದು  ಹೇಳಿದ್ದಾರೆ.

loader