ರೈತರ ಸಾವಿಗೆ ಮೋದಿ, ನಾಯಕರೇ ಕಾರಣ : ಪ್ರಕಾಶ್ ರೈ

First Published 1, Feb 2018, 8:41 AM IST
Prakash Rai Attack Against PM Modi
Highlights

2014ರ ನಂತರ ದೇಶದಲ್ಲಿ ನಡೆದ ರೈತರ ಆತ್ಮಹತ್ಯೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ನಾಯಕರೇ ಕಾರಣ ಎಂದು ನಟ ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: 2014ರ ನಂತರ ದೇಶದಲ್ಲಿ ನಡೆದ ರೈತರ ಆತ್ಮಹತ್ಯೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ನಾಯಕರೇ ಕಾರಣ ಎಂದು ನಟ ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರೈತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದು ದೇಶದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಕೌಟುಂಬಿಕ ಹಾಗೂ ಅನಾರೋಗ್ಯ ಸಮಸ್ಯೆಯೇ ಕಾರಣ ಎನ್ನುತ್ತಾರೆ. ರೈತರದು ಆತ್ಮಹತ್ಯೆ ಅಲ್ಲ. ಅದು ಕೊಲೆ. ಈ ಕೊಲೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ನಾಯಕರೇ ಕಾರಣ ಎಂದು ನಟ ಪ್ರಕಾಶ್ ರೈ ಕಿಡಿಕಾರಿದರು.

2014ರ ಲೋಕಸಭಾ ಚುನಾವಣೆ ವೇಳೆ ನರೇಂದ್ರ ಮೋದಿ ಅವರು ನಾನು ರೈತರೊಂದಿಗೆ ಇರುತ್ತೇನೆ ಎಂದು ಸಾಕಷ್ಟು ಭರವಸೆ ನೀಡಿದ್ದರು. ಅಧಿಕಾರ ಹಿಡಿದು ಮೂರೂವರೆ ವರ್ಷ ಕಳೆದರೂ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಜನ ಪ್ರಶ್ನೆ ಕೇಳಿದರೆ ಕೇಂದ್ರ ಸರ್ಕಾರದವರು ರಾಜ್ಯ ಸರ್ಕಾರದತ್ತ, ರಾಜ್ಯ ಸರ್ಕಾರದವರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುತ್ತಾರೆ.

ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದರೆ ಮರು ಪ್ರಶ್ನೆ ಹಾಕುತ್ತಾರೆ. ಅಣ್ಣಾ ಹಜಾರೆ ಅವರು ಜೈಲಿಗೆ ಹೋಗಲು ಸಿದ್ಧರಿರಬೇಕು ಎಂದು ಹೇಳಿದ್ದಾರೆ. ಜೈಲಿಗೆ ಹೋಗುವುದರ ಜೊತೆಗೆ ಕೆಲವರನ್ನು ಜೈಲಿಗೆ ಕಳುಹಿಸಬೇಕು ಎಂದು ಅವರು ಹೇಳಿದರು.

loader