ಅನ್ನಭಾಗ್ಯ ಸಿದ್ದು ಯೋಜನೆಯಲ್ಲ ಮೋದಿಭಾಗ್ಯ

First Published 23, Jan 2018, 8:47 PM IST
Prakash javadekar slams Siddaramaiah
Highlights

ಅನ್ನಭಾಗ್ಯ ಸಿದ್ದು ಯೋಜನೆಯಲ್ಲ ಮೋದಿಭಾಗ್ಯ

ಮಂಗಳೂರು(ಜ.23): ಸಾರ್ವಜನಿಕರಿಗೆ  ಕಡಿಮೆ ದರದಲ್ಲಿ ನೀಡುತ್ತಿರುವ ಅನ್ನಭಾಗ್ಯ ಯೋಜನೆ ಸಿದ್ದರಾಮಯ್ಯ ಅವರ ಯೋಜನೆಯಲ್ಲ ಅದು ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದಕ್ಷ ಅಧಿಕಾರಿಗಳ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ ಅವರು ಖಡಕ್ ಅಧಿಕಾರಿಗಳು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ವರ್ಗಾವಣೆಯಾಗುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ,ಅನ್ನಭಾಗ್ಯಕ್ಕೆ ಕೇಂದ್ರ ಕೊಡುಗೆ ಇದೆ. ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದ ಹಣ ಇದೆ. ಆದರೆ ಸಿದ್ದರಾಮಯ್ಯ ಮಾತ್ರ ಉಚಿತವಾಗಿ ಕೊಡುವ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಕೇವಲ ಭೃಷ್ಟಾಚಾರ ದ್ದರೆ ಬಿಜೆಪಿ ಆಡಳಿತದಲ್ಲಿ  ಅಭಿವೃದ್ಧಿ ಹೆಚ್ಚಾಗುತ್ತಿದೆ ಎಂದರು.

loader