ಪ್ರಮುಖ ನಾಯಕ ಕಾಂಗ್ರೆಸ್‌ನಿಂದ ಹೊರಬಂದು ಸಿಎಂ ಆಗಲಿದ್ದಾರೆ, ಜ್ಯೋತಿಷಿ ನುಡಿದ ಭವಿಷ್ಯದಿಂದ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಭವಿಷ್ಯ ಹೊರಬೀಳುತ್ತಿದ್ದಂತೆ ಕೆಲ ಮಹತ್ತರ ಬದಲಾವಣೆಗಳು ಕಾಣುತ್ತಿದೆ.
ಬೆಂಗಳೂರು (ಜ.25) ಕರ್ನಾಟಕ ರಾಜಕೀಯದಲ್ಲಿ ಕಳೆದ ಕೆಲ ತಿಂಗಳಿನಿಂದ ಅಧಿಕಾರ ಬದಲಾವಣೆ, ಅಧಿಕಾರ ಹಸ್ತಾಂತರ ಸೇರಿದಂತೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿದೆ. ಇತ್ತ ಹಲವು ರಾಜ್ಯಗಳಲ್ಲಿ ಪಕ್ಷದೊಳಗಿನ ಆತಂರಿಕ ಕಚ್ಚಾಟಗಳು ನಡೆಯುತ್ತಲೇ ಇದೆ. ಇದರ ನಡುವೆ ಕರ್ನಾಟಕದ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ನುಡಿದ ಭವಿಷ್ಯ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಪ್ರಮುಖ ನಾಯಕರೊಬ್ಬರು ಕಾಂಗ್ರೆಸ್‌ನಿಂದ ಅನಿವಾರ್ಯವಾಗಿ ಹೊರಬರಲಿದ್ದಾರೆ. ಈ ನಾಯಕ ಸೇರಿಕೊಳ್ಳುವ ಪಕ್ಷ ಬಲಗೊಂಡು ಮುಖ್ಯಮಂತ್ರಿ ಆಗುವ ಯೋಗ ಒದಗಿ ಬರಲಿದೆ ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದ್ದಾರೆ. ಅಂದ ಹಾಗೆ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದ ಪ್ರಮುಖ ಕಾಂಗ್ರೆಸ್ ನಾಯಕ ಬೇರೆ ಯಾರು ಅಲ್ಲ, ಶಶಿ ತರೂರ್.
ಜ್ಯೋತಿಷಿ ಭವಿಷ್ಯವೇನು?
ಶಶಿ ತರೂರ್ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕ. ಇತ್ತೀಚೆಗೆ ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಆಪರೇಶನ್ ಸಿಂದೂರ್ ಸೇರಿದಂತೆ ಹಲವು ವಿಚಾರಗಳಲ್ಲಿ ಕಾಂಗ್ರೆಸ್ ವಿರುದ್ಧ ನಿಲುವು ತೆಗೆದುಕೊಂಡು ಕಾಂಗ್ರೆಸ್‌ಗೆ ಮುಜುಗರ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ಪ್ರಮುಖ ಸಭೆಗಳಿಂದಲೂ ದೂರ ಉಳಿದಿದ್ದಾರೆ. ಶಶಿ ತರೂರ್‌ಗೆ ಪಕ್ಷದಿಂದ ಉಚ್ಚಾಟನೆಗೊಳ್ಳುವ ದುರ್ಯೋಗ ಇದೆ ಎಂದು ಜ್ಯೋತಿಷಿ ಭವಿಷ್ಯ ಹೇಳಿದ್ದಾರೆ. ಇಷ್ಟೇ ಅಲ್ಲ ಶಶಿ ತರೂರ್ ಸೇರಿಕೊಳ್ಳುವ ಪಕ್ಷ ಕೇರಳದಲ್ಲಿ ಬಲವರ್ಧನೆ ಪಡೆಯಲಿದೆ. ಇಷ್ಟೇ ಅಲ್ಲ ಮುಖ್ಯಮಂತ್ರಿಯಾಗುವ ಯೋಗವೂ ಇದೆ ಎಂದು ಜ್ಯೋತಿಷಿ ಹೇಳಿದ್ದಾರೆ.
ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದೇನು?
ಕೆರಳ ಚುನಾವಣೆಯಲ್ಲಿ ಶಶಿತರೂರ್ ಸ್ವಲ್ಪ ಖ್ಯಾತಿಯನ್ನು ಗಳಿಸಬಹುದು.ಉತ್ತಮ ಕ್ರಿಯಾಶೀಲ, ಶಿಸ್ತು ಇವರ ಗುಣ.ಲಗ್ನಾಧಿಪತಿಗೇ ನಿಪುಣ ಯೋಗ.ಲಗ್ನ, ಕರ್ಮಾಧಿಪತಿ ಬುಧನ ದಶೆ,ರಾಹು ಭುಕ್ತಿ ನಡೆಯುತ್ತಿದೆ.ಇವರು ಒಂದು ರೀತಿಯ ಪೊಲೀಸ್ ಮನಸ್ಥಿತಿ ಹೊಂದಿದ್ದಾರೆ. ವಿಮರ್ಷಿಸದೆ ಶೀಘ್ರ ನಿರ್ಧಾರಕ್ಕೆ ಬರುವವರೂ ಅಲ್ಲ. ಚಂದ್ರಾಷ್ಟಮದ ಗುರು ಇರೋದ್ರಿಂದ ನಿಸ್ವಾರ್ಥಿಯೂ,ಸ್ವಲ್ಪ ಬೇಜವಬ್ದಾರಿಯ ವರ್ತನೆಯೂ ಇದೆ.ಈಗೂ( ಸಂಕೋಚ ಪ್ರವೃತ್ತಿ) ಕೂಡಾ ಇದೆ.ಮೋಸಗಾರನಲ್ಲ. ಸದ್ಯ ಇವರು ಪಕ್ಷದಿಂದ ಉಚ್ಚಾಟನೆ ಗೊಳ್ಳುವ ದುರ್ಯೋಗವೂ ಇದ್ದು,ಅದರ ಜತೆಗೆ ಬೇರೊಂದು ಪಕ್ಷದಲ್ಲಿ ವಿಶೇಷ ಜವಬ್ದಾರಿ ಹೊರುವಂತಹ ಯೋಗವೂ ಇದೆ. ಈ ಜೂನ್ ನಂತರ ಬಲಿಷ್ಟವಾದ ಉನ್ನತ ಸ್ಥಾನ ಏರುವ ಯೋಗವೂ ಇದೆ.ಕೆಲವೊಮ್ಮೆ ನಿರ್ಲಕ್ಷಿಸುವ ಗುಣ ಇವರದ್ದಾಗಿದೆ. ಇವರು ಹಿಡಿಯುವ ಪಕ್ಷವು ಕೇರಳದಲ್ಲಿ ಬಲಿಷ್ಟವಾದರೆ ಮುಖ್ಯ ಮಂತ್ರಿ ಆಗುವ ಯೋಗವೂ ಇವರಿಗಿದೆ.ಒಟ್ಟಿನಲ್ಲಿ ಇವರೊಬ್ಬ ಸ್ತ್ರೀ ಲೋಲನೂ,ಪ್ರಬುದ್ಧನೂ ಆಗಿರು ವ್ಯಕ್ತಿತ್ವದವರು ಎಂದು ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.
ಶಶಿ ತರೂರ್ ಕಾಂಗ್ರೆಸ್ ವಿರುದ್ದ ಸಾಗುತ್ತಿದ್ದಾರೆ ಅನ್ನೋದು ಕಳೆದ ಹಲವು ತಿಂಗಳಿನಿಂದ ಚರ್ಚೆಯಾಗುತ್ತಿದೆ. ಇದೇ ಕಾರಣದಿಂದ ಶಶಿ ತರೂರ್ ಪಕ್ಷದಿಂದ ಉಚ್ಚಾಟನೆಗೊಳ್ಳವು ಸಾಧ್ಯತೆ ಇದೆ ಅನ್ನೋದು ಈಗಾಗಲೇ ಚರ್ಚೆಗಳು ನಡೆದಿದೆ. ಆದರೆ ಶಶಿ ತರೂರ್‌ಗೆ ಮುಖ್ಯಮಂತ್ರಿ ಯೋಗ ಇದೆ ಅನ್ನೋ ಭವಿಷ್ಯದ ಬೆನ್ನಲ್ಲೇ ಕಾಂಗ್ರೆಸ್ ರಾಜಕೀಯದಲ್ಲಿ ತಳಮಳಗಳು ಶುರುವಾಗಿದೆ. ಕಾರಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡ ಹಲವು ಪ್ರಮುಖರು ಮುಖ್ಯಮಂತ್ರಿಯಾಗಿದ್ದಾರೆ. ಈ ಪೈಕಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮುಂಚೂಣಿಯಲ್ಲಿದ್ದಾರೆ.


