ಆದರೆ ಇಡೀ ದಿನ ನಿಂತರೂ ಹಣ ಸಿಗದೇ ಇದ್ದಾಗ, ಶುಕ್ರವಾರ ಪುನಃ ಬಂದು ಸರತಿಯಲ್ಲಿ ನಿಂತಿದ್ದಾರೆ. ಆದರೆ ಆ ಮಧ್ಯೆಯೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಜತೆಗಿದ್ದ ಅತ್ತೆ ಬ್ಯಾಂಕಿನ ಮಹಿಳಾ ಸಿಬ್ಬಂದಿಗಳ ನೆರವಿನಿಂದ ಕೋಣೆಯೊಳಗೆ ಕರೆದೊಯ್ದು ಅಲ್ಲೇ ಹೆರಿಗೆ ಮಾಡಿಸಿದ್ದಾರೆ.

ಕಾನ್ಪುರ (ಡಿ.03): ನೋಟು ನಿಷೇಧ ಕ್ರಮದಿಂದಾಗಿ ಸರತಿಯಲ್ಲಿ ನಿಂತಿದ್ದಾಗ ಅಥವಾ ಕೆಲಸದ ಒತ್ತಡದಿಂದಾಗಿ ಈವರೆಗೆ 78 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಗರ್ಭಿಣಿಯೋರ್ವರು ಹಣಕ್ಕಾಗಿ ಸರತಿಯಲ್ಲಿ ನಿಂತಿದ್ದಾಗ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ರೇಶಾ ಎಂಬ ಮೂವತ್ತು ವರ್ಷ ಪ್ರಾಯದ ಮಹಿಳೆಯ ಗಂಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಅದರ ಪರಿಹಾರ ಹಣವನ್ನು ಪಡೆಯಲು ಗುರುವಾರದಂದು ಬ್ಯಾಂಕಿಗೆ ಬಂದಿದ್ದಾರೆ. ಆದರೆ ಇಡೀ ದಿನ ನಿಂತರೂ ಹಣ ಸಿಗದೇ ಇದ್ದಾಗ, ಶುಕ್ರವಾರ ಪುನಃ ಬಂದು ಸರತಿಯಲ್ಲಿ ನಿಂತಿದ್ದಾರೆ. ಆದರೆ ಆ ಮಧ್ಯೆಯೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಜತೆಗಿದ್ದ ಅತ್ತೆ ಬ್ಯಾಂಕಿನ ಮಹಿಳಾ ಸಿಬ್ಬಂದಿಗಳ ನೆರವಿನಿಂದ ಕೋಣೆಯೊಳಗೆ ಕರೆದೊಯ್ದು ಅಲ್ಲೇ ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

(ಸಾಂದರ್ಭಿಕ ಚಿತ್ರ)