ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ಚುನಾವಣಾ ಪ್ರಚಾರದ ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಂಡು ರಾಜ್ಯದಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷವೂ ಚುನಾವಣೆಯನ್ನು ಗೆಲ್ಲುವವರೆಗೂ ಸಿಎಂ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ' ಎಂದು ಈಗಾಗಲೇ ತಿಳಿಸಿದೆ.
ಸೂರತ್(ಡಿ.07): ಅಹಮದ್ ಪಟೇಲ್ ಗುಜರಾತ್ ಸಿಎಂ ಆಗಬೇಕಾದರೆ ಮುಸ್ಲಿಂ ಸಮುದಾಯ ಅವರನ್ನು ಬೆಂಬಲಿಸಬೇಕು' ಈ ರೀತಿಯ ಪೋಸ್ಟ'ರ್'ಗಳು ಸೂರತ್ ಜಿಲ್ಲೆಯ ಹಲವು ಕಡೆ ರಾರಾಜಿಸುತ್ತಿವೆ.
ಆದರೆ ಈ ಬಗ್ಗೆ ಸ್ಪಷ್ಟಿಕರಣ ನೀಡಿರುವ ಅಹಮದ್ ಪಟೇಲ್ ' ನಾನು ಗುಜರಾತ್ ಸಿಎಂ ಆಗುವುದಿಲ್ಲ. ಭವಿಷ್ಯದಲ್ಲಿಯೂ ನನಗೆ ಈ ಹುದ್ದೆ ಬೇಕಾಗಿಲ್ಲ. ಚುನಾವಣೆಯಲ್ಲಿ ಸೋಲುವ ಭಯದಿಂದ ಬಿಜೆಪಿಯವರು ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಸಿಎಂ ಅಭ್ಯರ್ಥಿಯಲ್ಲ, ಅಲ್ಲದೆ ಎಂದಿಗೂ ನಾನು ಆಗುವುದಿಲ್ಲ' ಎಂದು ತಿಳಿಸಿದ್ದಾರೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ಚುನಾವಣಾ ಪ್ರಚಾರದ ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಂಡು ರಾಜ್ಯದಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷವೂ ಚುನಾವಣೆಯನ್ನು ಗೆಲ್ಲುವವರೆಗೂ ಸಿಎಂ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ' ಎಂದು ಈಗಾಗಲೇ ತಿಳಿಸಿದೆ.
ಹಲವರು ರೇಸ್'ನಲ್ಲಿ
ಪಕ್ಷವೂ ಸಿಎಂ ಅಭ್ಯರ್ಥಿಯನ್ನು ಘೋಷಿಸದಿದ್ದರೂ ವಿರೋಧ ಪಕ್ಷದ ನಾಯಕ ಶಂಕರ್ ಸಿಂಗ್ ವಘೇಲಾ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭರತ್ ಸಿಂಗ್ ಸೋಲಂಕಿ, ರಾಷ್ಟ್ರೀಯ ವಕ್ತಾರ ಶಕ್ತಿಸಿಹ್ನ್ ಗೋಯಲ್, ಅರ್ಜುನ್ ಮೋದ್'ವಾಡಿಯಾ ಹಾಗೂ ಸಿದ್ದಾರ್ಥ್ ಪಟೇಲ್' ರೇಸ್'ನಲ್ಲಿದ್ದಾರೆ.
ಬಹುತೇಕ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ತವರು ಜಿಲ್ಲೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕೆಂಬ ಪಣ ತೊಟ್ಟಿದ್ದಾರೆ. ಬಿಜೆಪಿಯೂ 1998ರಿಂದ ಗುಜರಾತ್'ನಲ್ಲಿ ಪರಾಭವಗೊಂಡಿಲ್ಲ.