ಇಸ್ಲಾಮಾಬಾದ್‌[ಜೂ.18]: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಸೇನೆ, ತನ್ನ ಆಂತರಿಕ ಬೇಹುಗಾರಿಕಾ ಸಂಸ್ಥೆ (ಐಎಸ್‌ಐ)ಗೆ ಲೆಫ್ಟಿನೆಂಟ್‌ ಜನರಲ್‌ ಫೈಜ್‌ ಹಮೀದ್‌ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.

ಎಂಟು ತಿಂಗಳ ಹಿಂದಷ್ಟೇ ಲೆಫ್ಟಿನೆಂಟ್‌ ಜನರಲ್‌ ಅಸೀಮ್‌ ಮುನೀರ್‌ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಮತ್ತೆ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

ಏಪ್ರಿಲ್‌ 12ರಂದು ಮೆಜರ್‌ ಜನರಲ್‌ ಫೈಜ್‌ ಹಮೀದ್‌ರನ್ನು ಲೆಫ್ಟಿನೆಂಟ್‌ ಜನರಲ್‌ ಆಗಿ ಭಡ್ತಿ ನೀಡಿ, ಜನರಲ್‌ ಪ್ರಧಾನ ಕಚೇರಿಗೆ ವರ್ಗಾವಣೆ ಮಾಡಿದ್ದ ಸೇನೆ ಇದೀಗ ಅವರಿಗೆ ಬೇಹುಗಾರಿಕೆ ಕಾರ್ಯದಲ್ಲಿ ತೊಡಗಿರುವ ಐಎಸ್‌ಐ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದು ಅಚ್ಚರಿ ಮೂಡಿಸಿದೆ.