Asianet Suvarna News Asianet Suvarna News

ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಐಟಿ ದಾಳಿ?

ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಾಗ ಬೆಂಬಲ ನೀಡಿದ ನನ್ನ ಮೇಲೆಯೂ ಸಹ ಐಟಿ ದಾಳಿ ನಡೆಯುವ ಸಾಧ್ಯತೆ ಇದೆಯೆಂದು ಅಮಾನತುಗೊಂಡ ಜೆಡಿಎಸ್ ನಾಯಕ ಜಮ್ಮೀರ್ ಅಹ್ಮದ್ ಹೇಳಿದ್ದಾರೆ.

Possibility of IT Raid on Jameer Ahmad Khan

ಬೆಂಗಳೂರು (ಆ.10): ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಾಗ ಬೆಂಬಲ ನೀಡಿದ ನನ್ನ ಮೇಲೆಯೂ ಸಹ ಐಟಿ ದಾಳಿ ನಡೆಯುವ ಸಾಧ್ಯತೆ ಇದೆಯೆಂದು ಅಮಾನತುಗೊಂಡ ಜೆಡಿಎಸ್ ನಾಯಕ ಜಮ್ಮೀರ್ ಅಹ್ಮದ್ ಹೇಳಿದ್ದಾರೆ.

ಸುವರ್ಣ ನ್ಯೂಸ್ ಸಹೋದರ ಸಂಸ್ಥೆಯಾದ ನ್ಯೂಸೇಬಲ್’ಗೆ ನೀಡಿದ ಎಕ್ಲೂಸಿವ್ ಸಂದರ್ಶನದಲ್ಲಿ, ಡಿಕೆ ಶಿವಕುಮಾರ್ ಗೆ ಬೆಂಬಲಿಸಿದ್ದಕ್ಕಾಗಿ ನನ್ನ ಮೇಲೆ ಐಟಿ ದಾಳಿ ಬಗ್ಗೆ ನನಗೆ ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ ಎಂದು ಜಮ್ಮೀರ್ ಅಹ್ಮದ್ ಹೇಳಿದ್ದಾರೆ.

ಐಟಿ ದಾಳಿ ನಡೆಸಿ ಶಿವಕುಮಾರ್ ಅವರನ್ನು ಹೆದರಿಸಿರಬಹುದು. ಆದರೆ ನಾನು ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ನಾನು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಿದ್ದು ಕಳೆದ ವರ್ಷ 4.8 ಕೋಟಿ ತೆರಿಗೆ ಪಾವತಿಸಿದ್ದೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಒಪ್ಪಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್’ನಿಂದ ಸ್ಪರ್ಧಿಸಲು ಅಹ್ಮದ್ ಖಾನ್ ನಿರ್ಧರಿಸಿದ್ದಾರೆ. ಈ ಹಿನ್ನಲೆಯಲ್ಲಿ ಡಿಕೆಶಿಗೆ ಬೆಂಬಲಿಸಿದ್ದಾರೆ.  

Follow Us:
Download App:
  • android
  • ios