ರೋಮ್[ಮಾ.13]:  ಚೀನಾದಲ್ಲಿ ಇತ್ತೀಚೆಗಷ್ಟೇ ಜನರನ್ನು ಮನೆಯೊಳಗೇ ಕೂಡುವಂತೆ ಮಾಡಲು ಫ್ರೀ ಪೋರ್ನ್ ಬಿಡಲಾಗಿತ್ತು. ಜನರು ಮನೆಯೊಳಗೇ ಕೂರುವಂತಾಗಲು ಫ್ರೀಯಾಗಿ ನೀಲಿಚಿತ್ರಗಳನ್ನು ನೋಡುವ ಅವಕಾಶ ನೀಡಲಾಗಿತ್ತು. ಇದೀಗ ಇನ್ನೊಂದು ರಾಷ್ಟ್ರವೂ ಇದೇ ಮಾರ್ಗವನ್ನು ಅಳವಡಿಸಿಕೊಂಡಿದೆ.

ಚೀನಾದಲ್ಲಿ ಹುಟ್ಟಿದ ಮಹಾಮಾರಿ ಕೊರೋನಾ ವೈರಸ್ ಜಗತ್ತಿನ ಇತರ ರಾಷ್ಟ್ರಗಳಿಗೂ ವ್ಯಾಪಿಸಿದ್ದು, ಇಟಲಿ ಅವುಗಳಲ್ಲಿ ಒಂದು. ಕೊರೋನಾ ಕಾಟದಿಂದ ತತ್ತರಿಸಿದ ರಾಷ್ಟ್ರಗಳ ಪೈಕಿ ಇಟಲಿಯೂ ಮುಂದಿದೆ. ಎಚ್ಚೆತ್ತುಕೊಂಡಿರುವ ಇಟಲಿಯೂ ಚೀನಾದ ಐಡಿಯಾ ಫಾಲೋ ಮಾಡಿದೆ.

ಕೊರೋನಾ ಬಂದಲ್ಲಿ ಖುಲ್ಲಂ ಖುಲ್ಲಾ, ಪುಕ್ಕಟೆ ಸಿಕ್ತು ಪೋರ್ನ್ ಬೆಲ್ಲ, ನೀಲಿ ಪ್ರಿಯರು ಜಿಂಗಾಲಾಲಾ!

ಯುರೋಪಿಯನ್ ರಾಷ್ಟ್ರಗಳಲ್ಲಿ ಇಟಲಿಯಲ್ಲಿ ಪೋರ್ನ್ ಸೈಟ್‌ಗಳ ಪ್ರೀಮಿಯಮ್ ಸೇವೆ ಬಿಟ್ಟಿಯಾಗಿ ನೀಡಲಾಗ್ತಿದೆ. ಸದ್ಯ ಒಂದು ತಿಂಗಳು ಇಟಲಿಯಲ್ಲಿ ಫ್ರೀ ಪೋರ್ನ್ ವಿಡಿಯೋ ವೀಕ್ಷಿಸಬಹುದಾಗಿದೆ.

ಪೋರ್ನ್ ಸೈಟ್ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಮಾಡೆಲ್ ಹಬ್‌ನಿಂದ ಬಂದ ಎಲ್ಲ ಆದಾಯವನ್ನು ಕೊರೋನಾ ವಿರುದ್ಧ ಹೋರಾಡಲು ಪೊಲೀಸರಿಗೆ ನೆರವಾಗಲು ವಿನಿಯೋಗಿಸಲಾಗುತ್ತದೆ ಎಂದಿದ್ದಾರೆ.

ಬೆಂಗಳೂರಲ್ಲಿ 5ನೇ ಕೊರೋನಾ ಕೇಸ್ : ಗೂಗಲ್ ಉದ್ಯೋಗಿಗೆ ಸೋಂಕು

’ಫೋರ್ಝಾ ಇಟಲಿಯಾ.. ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಮಾಡೆಲ್ ಹಬ್ ಫ್ಲಾಟ್ ಫಾರ್ಮ್ ನಿಂದ ಬರುವ ಆದಾಯವನ್ನು ಕೊರೋನಾ ತಡೆಗಟ್ಟಲು ಬಳಸಲು ನಿರ್ಧರಿಸಿದ್ದೇವೆ. ಮಾರ್ಚ್ ತಿಂಗಳಿನಿಂದ ಈ ಮೊತ್ತವನ್ನು ಇಟಲಿಯಲ್ಲಿ ಕೊರೋನಾ ತಡೆಯಲು ವಿನಿಯೋಗಿಸಲಾಗುತ್ತದೆ. ಯಾವುದೇ ದರವನ್ನು ತೆರದೆಯೇ, ಕ್ರೆಡಿಟ್ ಕಾರ್ಡ ಇಲ್ಲದೆಯೇ ನೀವು ಫ್ರೀಯಾಗಿ ಪೋರ್ನ್ ವೀಕ್ಷಿಸಬಹುದು’ ಎಂದಿದೆ.

ಪೋರ್ನ್ ವೀಕ್ಷಿಸುವ ಟಾಪ್ 20 ರಾಷ್ಟ್ರಗಳಲ್ಲಿ ಇಟಲಿ 7ನೇ ಸ್ಥಾನದಲ್ಲಿದೆ ಎಂಬುದು ವಿಶೇಷ. ಇಟಲಿಯಲ್ಲಿ 12,000 ಕೊರೋನಾ ವೈರಸ್ ರೋಗಿಗಳು ಪತ್ತೆಯಾಗಿದ್ದು, ಇವರಲ್ಲಿ 827 ಜನ ಮೃತಪಟ್ಟಿದ್ದಾರೆ. ಜಗತ್ತಿನಾದ್ಯಂತ 124000 ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿದ್ದು, ಭಾರತದಲ್ಲಿ 74 ಪ್ರಕರಣ ಪತ್ತೆಯಾಗಿದೆ.

ಮಾರ್ಚ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ