ನವದೆಹಲಿ[ಸೆ. 04]  ತಪ್ಪು ಟ್ವೀಟ್ ಮಾಡಿದ್ದಕ್ಕೆ ಒಂದು ಕಡೆ ಆಕ್ರೋಶ.. ಟ್ರೋಲ್.. ಆದರೆ ಇನ್ನೊಂದು ಕಡೆ ಇದೇ ವಿಚಾರಕ್ಕೆ ಧನ್ಯವಾದ! ಏನು ಅರ್ಥ ಆಗ್ತಾ ಇಲ್ವಾ.. ಸುದ್ದಿ ಓದಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಪೆಲೆಟ್​ ಗುಂಡೇಟಿನಿಂದ ಗಾಯಗೊಂಡ ಕಾಶ್ಮೀರಿ ಯುವಕ ಎಂದು ಪಾಕಿಸ್ತಾನದ ಭಾರತದಲ್ಲಿನ ಮಾಜಿ ರಾಯಭಾರಿ ಅಬ್ದುಲ್​ ಬಸಿತ್​ ನೀಲಿಚಿತ್ರಗಳ ತಾರೆ ಜಾನಿ ಸಿನ್ಸ್​ನ ಫೋಟೋವನ್ನು ಟ್ವೀಟ್​ ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು, ನೆಟ್ಟಿಗರು ಪಾಕ್ ರಾಜತಾಂತ್ರಿಕ ಅಧಿಕಾರಿಯ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿದ್ದರು.

ಆದರೆ ಇದಕ್ಕೆ ಪ್ರತಿಯಾಗಿ ಅಬ್ದುಲ್​ ಬಸಿತ್​ಗೆ ಜಾನಿ ಸಿನ್ಸ್​ ಧನ್ಯವಾದ ಅರ್ಪಿಸಿದ್ದಾರೆ. ಅಬ್ದುಲ್​ ಬಸಿತ್​ ಟ್ವೀಟ್​ ವೈರಲ್​ ಆದ ನಂತರ ಜಾನಿ ಸಿನ್ಸ್​ ಟ್ವಿಟರ್​ ಖಾತೆಯನ್ನು ಫಾಲೋ ಮಾಡುವವರ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ತಮ್ಮ ಟ್ವಿಟರ್​ ಹಿಂಬಾಲಕರ ಸಂಖ್ಯೆಯನ್ನು ಹೆಚ್ಚಿಸಿದ ಅಬ್ದುಲ್​ ಬಿಸತ್​ಗೆ ಧನ್ಯವಾದ ಸಲ್ಲಿಸಿ ನನ್ನ ಕಣ್ಣಿಗೆ ಏನೂ ಆಗಿಲ್ಲ, ನಾನು ಆರೋಗ್ಯವಾಗಿದ್ದೇನೆ ಎಂದು ಟ್ವೀಟ್ ಮೂಲಕವೇ ಉತ್ತರಿಸಿದ್ದಾರೆ.

ಈ ಬಸ್‌ ತುಂಬಾ ನೀಲಿ ನಟಿಯರದ್ದೇ ಹವಾ!

ಜಾನಿ ಸಿನ್ಸ್​ ಫೋಟೋ ಹಾಕಿ ಕಾಶ್ಮೀರದಲ್ಲಿ ಭಾರತೀಯ ಭದ್ರತಾಪಡೆಗಳ ಪೆಲೆಟ್​ ಗುಂಡಿನ ದಾಳಿಗೆ ತುತ್ತಾಗಿರುವ ಅನಂತ್​ನಾಗ್​ ಜಿಲ್ಲೆಯ ಯೂಸೂಫ್​ ಚಿತ್ರವಿದು… ಪೆಲೆಟ್​ ಗನ್​ಗಳಿಂದಾಗಿ ಈತ ತನ್ನ ಕಣ್ಣು ಕಳೆದುಕೊಂಡಿದ್ದಾನೆ… ಈತನ ಬಗ್ಗೆ ಧ್ವನಿ ಎತ್ತಿ… ಎಂದು ಅಬ್ದುಲ್​  ಎಂಬಾತ ಹಂಚಿಕೊಂಡಿದ್ದ  ವಿಚಾರವನ್ನು ಬಸಿತ್ ರಿಟ್ವಿಟ್ ಮಾಡಿದ್ದರು.

ಬಸಿತ್​ ರೀಟ್ವೀಟ್​ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪಾಕ್​ ರಾಯಭಾರಿ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ ನಂತರ ಬಸಿತ್​ ತಮ್ಮ ಟ್ವೀಟ್​ ಡಿಲೀಟ್​ ಮಾಡಿದ್ದರು.