ಕೇಂದ್ರ ಸಚಿವರ ಕಾರ್ಯಕ್ರಮದಲ್ಲಿ ಪಾರ್ನ್ ಸಿನೆಮಾ ಪ್ರದರ್ಶನ: ತನಿಖೆಗೆ ಆದೇಶ
Porn movie played during Union Minister's visit in Assam: ವರ್ಕ್ ಫ್ರಂ ಹೋಮ್ ನಡೆಯುತ್ತಿದ್ದ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ವೇಳೆ ಹಲವು ನಗೆಪಾಟಲಿಗೀಡಾಗುವ ವಿಡಿಯೋಗಳು ಬಂದಿತ್ತು. ಈಗ ಅದಕ್ಕಿಂತಲೂ ಮುಜುಗರದ ಘಟನೆ ನಡೆದಿದೆ.
ಅಸ್ಸಾಂ: ಕೇಂದ್ರ ಸಚಿವರು ಹಾಜರಾಗಿದ್ದ ಕಾರ್ಯಕ್ರಮದಲ್ಲೇ ಅಚಾತುರ್ಯವೊಂದು ನಡೆದಿದೆ. ಕಾರ್ಯಕ್ರಮದಲ್ಲಿ ಎಲ್‌ಸಿಡಿ ಸ್ಕ್ರೀ ನ್ ಹಾಕಲಾಗಿತ್ತು. ಸರ್ಕಾರದ ಸಾಧನೆ, ಯೋಜನೆ ಹೀಗೆ ಹಲವು ವಿಡಿಯೋಗಳನ್ನು ಹಾಕಿ ಬಿಡಲಾಗಿತ್ತು. ಆದರೆ ಅದರ ನಡುವೆ ಪಾರ್ನ್ ಸಿನೆಮಾವೊಂದು ಪ್ರದರ್ಶನವಾಗಿದೆ. ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಜನ ಇದನ್ನು ನೋಡಿ ತಬ್ಬಿಬ್ಬಾಗಿದ್ದಾರೆ.
ಕೇಂದ್ರ ಸಚಿವ ರಾಮೇಶ್ವರ್ ತೇಲಿ, ಅಸ್ಸಾಂ ಕಾರ್ಮಿಕ ಸಚಿವ ಸಂಜಯ್ ಕಿಸಾನ್ ಮತ್ತು ಇಂಡಿಯನ್ ಆಯಿಲ್ ಸಂಸ್ಥೆಯ ಅಧಿಕಾರಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಇದರಿಂದ ಎಲ್ಲರೂ ಮುಜುಗರಕ್ಕೆ ಒಳಗಾಗುವಂತಾಗಿದೆ. ತಿನ್ಸುಕಿಯಾ ಎಂಬ ಅಸ್ಸಾಂನ ಜಿಲ್ಲೆಯೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು.
ಮೆತನಾಲ್ ಬ್ಲೆಂಡೆಡ್ ಎಮ್-15 ಪೆಟ್ರೋಲ್ ಲಾಂಚ್‌ಗಾಗಿ ಈ ಕಾರ್ಯಕ್ರಮವನ್ನು ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿತ್ತು. ಎಲ್‌ಸಿಡಿ ಸ್ಕ್ರೀನ್ ವೇದಿಕೆಯ ಹಿಂಭಾಗದಲ್ಲಿ ಹಾಕಲಾಗಿತ್ತು. ಇಂಡಿಯನ್ ಆಯಿಲ್ ಅಧಿಕಾರಿಗಳು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ವೇದಿಕೆಯಲ್ಲಿದ್ದ ಎಲ್‌ಸಿಡಿಯಲ್ಲಿ ಪಾರ್ನ್ ಸಿನೆಮಾ ಪ್ರದರ್ಶನವಾಗಿದೆ. ಕಾರ್ಯಕ್ರಮ ಆಯೋಜಿಸಿದವರು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ವಿಡಿಯೋವನ್ನು ನಿಲ್ಲಿಸಿದ್ದಾರೆ. ಆದರೆ ಅಷ್ಟರೊಳಗಾಗಲೇ ಬಂದಿದ್ದ ಜನ ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೋ ಮಾಡಿದ್ದಾರೆ.
ಇದನ್ನೂ ಓದಿ: ಶವಯಾತ್ರೆ ವೇಳೆ ಪೆಟ್ಟಿಗೆಯೊಳಗಿಂದ ಟಕ್ ಟಕ್ ಸದ್ದು : ಪೆಟ್ಟಿಗೆ ತೆರೆದು ನೋಡಿದವರಿಗೆ ಶಾಕ್
ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಶೀಘ್ರವೇ ಸ್ಥಳಕ್ಕಾಗಮಿಸಿದ್ದು, ಕೇಂದ್ರ ಸಚಿವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಬೇಕಂತಲೇ ಕಿಡಿಗೇಡಿಗಳು ಅಶ್ಲೀಲ ಚಿತ್ರ ಹಾಕಿದ್ದಾರ ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ತಿನ್ಸುಕಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ ಕಾರ್ಯಕ್ರಮವನ್ನು ಇಂಡಿಯನ್ ಆಯಿಲ್ ಸಂಸ್ಥೆ ಲೈವ್ ಸ್ಟ್ರೀಮ್ ಕೂಡ ಮಾಡುತ್ತಿದ್ದರು. ಜೂಂ ಮತ್ತು ಟ್ವಿಟ್ಟರ್‌ನಲ್ಲಿ ಏಕಕಾಲಕ್ಕೆ ಕಾರ್ಯಕ್ರಮ ಲೈವ್ ಆಗಿದೆ, ಆ ವೇಳೆ ಸಾಮಾಜಿಕ ಜಾಲತಾಣದಲ್ಲೂ ಘಟನೆಯನ್ನು ರೆಕಾರ್ಡ್ ಮಾಡಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನೂ ಓದಿ: ಅಂತ್ಯಕ್ರಿಯೆ ವೇಳೆ ಚಟ್ಟದ ಮೇಲಿಂದ ಎದ್ದ ಅಜ್ಜಿ, ಬೆಚ್ಚಿ ಬಿದ್ದ ಜನ!
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರಾಮೇಶ್ವರ್ ತೇಲಿ, "ನಾನು ವಿಡಿಯೋವನ್ನು ನೋಡಿಲ್ಲ. ಆದರೆ ನಮ್ಮ ಪಿಎ ಅಶ್ಲೀಲ ವಿಡಿಯೋ ಪ್ಲೇ ಮಾಡಲಾಗಿದೆ ಎಂದು ತಿಳಿಸಿದರು. ಘಟನೆ ಸಂಬಂಧ ತನಿಖೆಗೆ ಆದೇಶಿಸಿದ್ದೇನೆ. ಜತೆಗೆ ಸಂಬಂಧಪಟ್ಟವರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳುವಂತೆಯೂ ತಿಳಿಸಿದ್ದೇನೆ," ಎಂದು ಹೇಳಿದ್ದಾರೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಮುಖ್ಯಸ್ಥ ಎಸ್ ಎಂ ವೈದ್ಯ, ಅಸ್ಸಾಂ ಪೆಟ್ರೊಕೆಮಿಕಲ್ಸ್ ಲಿಮಿಟೆಡ್‌ನ ಮುಖ್ಯಸ್ಥ ಬಿಕುಲ್ ದೇಖಾ, ಮುನ್ಸಿಪಲ್ ಡೆಪ್ಯುಟಿ ಮುಖ್ಯಸ್ಥ ನವ್ನೀತಾ ಅಗರ್ವಾಲ್ ಮತ್ತು ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.